ಉಡುಪಿ: ನಗರಬೆಟ್ಟು ಗೋಪಾಲನಾಯಕ್ ಮತ್ತು ಮಕ್ಕಳ ವತಿಯಿಂದ ನೆರವೇರಿಸಲ್ಪಡುವ ಚಂಡಿಕಾಹವನ ಪ್ರಯುಕ್ತ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಳಿಕೆಯಲ್ಲಿ ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇದೇ ಜ.18ರಂದು ಮಧ್ಯಾಹ್ನ 1.30ರಿಂದ “ಕನಕಾಂಗಿ ಗಂಧರ್ವ ಕನ್ಯೆ” ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ರಾಘವೇಂದ್ರ ಆಚಾರ್ ಜನ್ಸಾಲೆ. ಮದ್ದಲೆಯಲ್ಲಿ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆ – ರಾಕೇಶ್ ಮಲ್ಯ ಮತ್ತು ಕೋಟ ಶಿವಾನಂದ.
ಮುಮ್ಮೇಳ: ಸ್ತ್ರೀ ವೇಷ – ಶಶಿಕಾಂತ್ ಶೆಟ್ಟಿ, ವಂಡಾರು ಗೋವಿಂದ, ಮಂಜುನಾಥ ಕೆರವಳ್ಳಿ, ಶಶಾಂಕ್, ಹಾಸ್ಯ – ರಮೇಶ್ ಭಂಡಾರಿ, ಶ್ರೀಧರ ಭಟ್ ಕಾಸರಕೋಡು.
ಪುರುಷ ಪಾತ್ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಕೃಷ್ಣಯಾಜಿ ಬಳ್ಳೂರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ ಆಚಾರ್ಯ ತೀರ್ಥಳ್ಳಿ, ನೀಲ್ಕೋಡು ಶಂಕರ ಹೆಗಡೆ, ಈಶ್ವರ ನಾಯ್ಕ ಮಂಕಿ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ನರಸಿಂಹ ಗಾಂವ್ಕರ್, ನಾಗರಾಜ್ ಭಂಡಾರಿ ಗುಣವಂತೆ, ಚಂದ್ರಹಾಸ ಗೌಡ ಹೊಸಪಟ್ಟಣ ಮತ್ತು ಇತರರು.
ನಿತ್ಯಾನಂದ ನಾಯಕ್ ನರಸಿಂಗೆ ಸಂಯೋಜಿಸುವರು.












