ನ್ಯೂಸ್ ಪ್ಲಸ್ ಕನ್ನಡ ಟಿ.ವಿಯ ವೆಬ್ ಸೈಟ್- ಲೋಗೋ ಅನಾವರಣ ಕಾರ್ಯಕ್ರಮ

ಉಡುಪಿ: ನ್ಯೂಸ್ ಪ್ಲಸ್ ಕನ್ನಡ ಸುದ್ದಿವಾಹಿನಿಯ ವೆಬ್ ಸೈಟ್ ಮತ್ತು ಲೋಗೋ ಅನಾವರಣ ಕಾರ್ಯಕ್ರಮ ಇಂದು ಉಡುಪಿಯ ಕಿದಿಯೂರು ಹೊಟೇಲ್‌ನಲ್ಲಿ ನಡೆಯಿತು.

ತುಳು ಚಿತ್ರರಂಗದ ನಟಿ ಮತ್ತು ರೂಪದರ್ಶಿ ಸ್ವಾತಿ ಬಂಗೇರ ನ್ಯೂಸ್ ಪ್ಲಸ್ ಕನ್ನಡದ ವೆಬ್ ಸೈಟ್ ಹಾಗೂ ಲೋಗೋ ಅನಾವರಣಗೊಳಿಸಿ ವಿಭಿನ್ನವಾದ ಲೋಗೋ ಹಾಗೂ ಯೋಚನೆಗಳುಳ್ಳ ತಂಡದಿಂದ ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ನ್ಯೂಸ್ ಪ್ಲಸ್ ಕನ್ನಡ ಟಿ ವಿ ವಾಹಿನಿ ಯಶಸ್ಸಿನತ್ತ ಸಾಗಲಿ.ಯುವ ಮನಸ್ಸಿನ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಟಿವಿ ವಾಹಿನಿ ನೇರ ಮತ್ತು ನಿಷ್ಠುರವಾಗಿ ಸುದ್ದಿಗಳನ್ನು ಸಮಾಜಕ್ಕೆ ನೀಡಬೇಕು. ಮಾಧ್ಯಮ ಎಲ್ಲಕ್ಕಿಂತ ಮಿಗಿಲಾಗಿ ಸಮಾಜದ ವ್ಯವಸ್ಥೆಯನ್ನು ಸರಿದೂಗಿಸುವಂತಿರಬೇಕು. ಅಲ್ಲ ಸಲ್ಲದ ವಿಚಾರಗಳನ್ನು ಭಿತ್ತರಿಸುವುದು ತಪ್ಪಾಗುತ್ತದೆ. ಒಳ್ಳೆಯ ಸುದ್ದಿಗೆ ಸಾಕಷ್ಟು ನೋಡುಗರಿದ್ದಾರೆ. ಟಿವಿ ಪ್ಲಸ್ ಸಾವರ್ಜನಿಕರ ಹಿತದೃಷ್ಟಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು.

ಉದ್ಯಮಿ ಜೆರ್ರಿ ಡಯಾಸ್ ಅವರು ಮಾತನಾಡಿ, ಟಿವಿ ಚ್ಯಾನೆಲ್ ನಡೆಸುವುದು ಸುಲಭವಲ್ಲ. ಸಾತ್ವಿಕ ಸುದ್ದಿಗಳನ್ನು ಭಿತ್ತರಿಸುವುದು ಮತ್ತು ಎಲ್ಲರ ಸಹಕಾರದಿಂದ ಚ್ಯಾನೆಲ್ ನಡೆಯಲು ಸಾಧ್ಯವಿದೆ. ನ್ಯೂಸ್ ಪ್ಲಸ್ ಸುದ್ದಿ ಸಂಸ್ಥೆ ಉಡುಪಿಯಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಯಲಿ  ಎಂದು ಹಾರೈಸಿದರು. ನ್ಯೂಸ್ ಪ್ಲಸ್ ತಂಡದ ಪರವಾಗಿ ಕ್ಸೇವಿಯರ್ ಡಿಮೆಲ್ಲೋ ಮಾತನಾಡಿದರು.

ಕಾರ್ಯಕ್ರಮದಲ್ಲಿ ನ್ಯೂಸ್ ಪ್ಲಸ್ ನ ಗೌರವ ಸಲಹೆಗಾರರಾದ ಎಸ್.ಕೆ ಕುಂಜಾಲು, ಸುಪ್ರೀತ್ ಶೆಟ್ಟಿ,ಸೀತಾರಾಮ ಭಟ್,ಶಿವಾಜಿ ಸುವರ್ಣ,ಶಶಿಧರ್ ಶೆಟ್ಟಿ,ಶೋಧನ್ ಶೆಟ್ಟಿ,ಎಸ್.ಕೆ ಸಾಲ್ಯಾನ್,ಯಶವಂತ್ ಸುವರ್ಣ ಹಾಗೂ ಮೂನ್ ಲೈಟ್  ಮೀಡಿಯಾ ಕ್ರಿಯೇಶನ್ ನ ಸದಸ್ಯರು ಉಪಸ್ಥಿತರಿದ್ದರು.ವಿಜೇತಾ ಕಾರ್ಯಕ್ರಮ ನಿರೂಪಿಸಿದರು.