ನ್ಯೂಸ್ ಪ್ಲಸ್ ಕನ್ನಡ ಟಿ.ವಿಯ ವೆಬ್ ಸೈಟ್- ಲೋಗೋ ಅನಾವರಣ ಕಾರ್ಯಕ್ರಮ

ಉಡುಪಿ: ನ್ಯೂಸ್ ಪ್ಲಸ್ ಕನ್ನಡ ಸುದ್ದಿವಾಹಿನಿಯ ವೆಬ್ ಸೈಟ್ ಮತ್ತು ಲೋಗೋ ಅನಾವರಣ ಕಾರ್ಯಕ್ರಮ ಇಂದು ಉಡುಪಿಯ ಕಿದಿಯೂರು ಹೊಟೇಲ್‌ನಲ್ಲಿ ನಡೆಯಿತು. ತುಳು ಚಿತ್ರರಂಗದ ನಟಿ ಮತ್ತು ರೂಪದರ್ಶಿ ಸ್ವಾತಿ ಬಂಗೇರ ನ್ಯೂಸ್ ಪ್ಲಸ್ ಕನ್ನಡದ ವೆಬ್ ಸೈಟ್ ಹಾಗೂ ಲೋಗೋ ಅನಾವರಣಗೊಳಿಸಿ ವಿಭಿನ್ನವಾದ ಲೋಗೋ ಹಾಗೂ ಯೋಚನೆಗಳುಳ್ಳ ತಂಡದಿಂದ ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ನ್ಯೂಸ್ ಪ್ಲಸ್ ಕನ್ನಡ ಟಿ ವಿ ವಾಹಿನಿ ಯಶಸ್ಸಿನತ್ತ ಸಾಗಲಿ.ಯುವ ಮನಸ್ಸಿನ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದರು. ಉಡುಪಿ ಜಿಲ್ಲಾ […]

ಹಿಜಾಬ್ ವಿವಾದದ ಮೂಲಕ ಸರಕಾರಿ ಕಾಲೇಜಿನ ಶೈಕ್ಷಣಿಕ ವಾತಾವರಣ ಕದಡಲು ಯತ್ನಿಸುವವರಿಗೆ ತಕ್ಕ ಉತ್ತರ ನೀಡಲು ಬದ್ಧ: ಯಶ್‍ಪಾಲ್ ಸುವರ್ಣ

ಉಡುಪಿ: ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಕಾಲೇಜಿನ ಶೈಕ್ಷಣಿಕ ವಾತಾವರಣ ಕದಡಲು ಯತ್ನಿಸುವ ಕೆಲವು ಕೋಮುವಾದಿ ಸಮಾಜಘಾತಕ ಶಕ್ತಿಗಳಿಗೆ ತಕ್ಕ ಉತ್ತರ ನೀಡಲು ಬದ್ಧ ಎಂದು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ, ಬಿಜೆಪಿ ಮುಖಂಡ ಯಶ್‍ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 3 ದಿನಗಳಿಂದ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಿದ ಕಾಲೇಜಿನ ಪ್ರಾಂಶುಪಾಲರಿಗೆ ಒತ್ತಡ ಹೇರಿರುವುದು ಖಂಡನೀಯ. ಕಳೆದ 36 ವರ್ಷಗಳಿಂದ […]

ಮಣಿಪಾಲ: ಕಾದ ಇಳೆಗೆ ತಂಪೆರೆದ ಅಕಾಲಿಕ ಮಳೆ; ಜನರು ಹೈರಾಣು

ಮಣಿಪಾಲ: ಮಣಿಪಾಲ ಪರಿಸರದಲ್ಲಿ ಇಂದು ಸಂಜೆ 7 ಗಂಟೆಯ ಸುಮಾರಿಗೆ ಅಕಾಲಿಕ ಮಳೆ ಸುರಿದಿದ್ದು, ಇಳೆಗೆ ತಂಪೆರೆದಿದೆ. 7 ಗಂಟೆಗೆ ಆರಂಭಗೊಂಡ ಮಳೆ ಸತತವಾಗಿ ಅರ್ಧ ತಾಸು ಸುರಿಯಿತು. ಇದರಿಂದ ಕೆಲಸ ಮುಗಿಸಿ ಮನೆಗೆ ಬರುವ ಜನರು ಪರದಾಡುವಂತಾಯಿತು. ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ಆಗಿ ಸುರಿದ ಮಳೆಗೆ ಜನರು ಕೆಲಕಾಲ ಹೈರಾಣಾದರು.

ಹಿರಿಯ ನಾಗರಿಕರಿಗೆ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ ಸಂಸ್ಥೆಯಿಂದ ಹೊಸ ವರ್ಷಕ್ಕೆ ಉಚಿತ ಗ್ಲುಕೊಮಿಟರ್ ಬಂಪರ್ ಕೊಡುಗೆ

50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ ಸಂಸ್ಥೆಯಿಂದ ಹೊಸ ವರ್ಷಕ್ಕೆ ಗ್ಲುಕೊಮೀಟರ್ (ಮಧುಮೇಹ/ಶುಗರ್‌ ಅಳೆಯುವ ಉಪಕರಣ) ಉಚಿತವಾಗಿ ದೊರಕಲಿದೆ. ಆರ್ಹ ಹಿರಿಯ ನಾಗರಿಕರು ತಮ್ಮ ಆಧಾರ್ ಕಾರ್ಡ್ ತೋರಿಸಿ ಇದರ ಸದುಪಯೋಗವನ್ನು ಪಡೆಯಬಹುದು. ಈ ಕೊಡುಗೆ ಜನವರಿ 15ನೇ ತಾರೀಖಿನ ವರೆಗೆ ಮಾತ್ರ, ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ ಸಂಸ್ಥೆಯ ಉಡುಪಿ, ಮಂಗಳೂರು, ಕುಂದಾಪುರ ಶಾಖೆಯಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ ಉಡುಪಿ, ಮಂಗಳೂರು, ಕುಂದಾಪುರ ಶಾಖೆಯಲ್ಲಿ ಸಂಪರ್ಕಿಸಿ ತಿಳಿದುಕೊಳ್ಳಬಹುದು. […]

ಹೋಟೆಲ್ ಗಳಿಗೆ ಸಿಹಿ ಸುದ್ದಿ: ಎಲ್‌ಪಿಜಿ ಸಿಲಿಂಡರ್ ದರದಲ್ಲಿ ₹102.50 ಇಳಿಕೆ

ಬೆಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 102.50 ರೂಪಾಯಿ ಇಳಿಕೆಯಾಗಿದೆ. ಈ ಬಗ್ಗೆ ಎಎನ್‌ಐ ಟ್ವೀಟ್ ಮಾಡಿದೆ. ಈ ಮೂಲಕ ದೆಹಲಿಯಲ್ಲಿ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 1998 ರೂಪಾಯಿ ಆಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ ಎಂದು ವರದಿ ತಿಳಿಸಿದೆ.