ಬ್ರಹ್ಮಾವರ: ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಸ್ವಂತ ಆಡಳಿತ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭವು ಶಿರೂರು-ಮೂರ್ಕೈ ಮುಖ್ಯರಸ್ತೆಯ ಶ್ರೀ ಮಲ್ಲಿಕಾರ್ಜುನ ಸೌಧದಲ್ಲಿ ನಾಳೆ (ಜ.2) ನಡೆಯಲಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಅಂದು ಬೆಳಿಗ್ಗೆ 11.30ಕ್ಕೆ ಸಮಾರಂಭವನ್ನು ಉದ್ಘಾಟಿಸುವರು. ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೃಷ್ಣ ನಾಯ್ಕ ಶೇಡಿಕೋಡ್ಲು ಅಧ್ಯಕ್ಷತೆ ವಹಿಸುವರು.
ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ, ಕೆ. ಜಯಪ್ರಕಾಶ ಹೆಗ್ಡೆ, ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ, ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಪ್ರವೀಣ್ ಬಿ. ನಾಯಕ್ ಸಹಕಾರ ಸಂಘಗಳ ಉಪನಿಬಂಧಕರು, ಎಚ್. ಧನಂಜಯ ಶೆಟ್ಟಿ, ಅನುವಂಶಿಕ ಮೊಕ್ತೇಸರರು, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಂದಾರ್ತಿ, ಅರುಣ್ ಕುಮಾರ್ ಎಸ್.ವಿ., ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕುಂದಾಪುರ ಉಪ ವಿಭಾಗ, ಹೆಗ್ಗುಂಜೆ ಅಶೋಕ ಕುಮಾರ್ ಶೆಟ್ಟಿ, Architect, Process Architect, Bangalore, ಜ್ಯೋತಿ ಸಂತೋಷ ಹೆಗ್ಡೆ, ಅಧ್ಯಕ್ಷರು, 12ನೇ ಹೆಗ್ಗುಂಜೆ ಗ್ರಾಮ ಪಂಚಾಯತ್, ಎಮ್. ಕೆ. ನಾಯ್ಕ ಮಿಯಾರು, ಅಧ್ಯಕ್ಷರು, ಕರ್ನಾಟಕ ರಾಜ್ಯ ಕುಡುಬಿ ಸೇವಾ ಸಂಘ ರಿ, ಗೋಳಿಯಂಗಡಿ, ಪ್ರಭಾಕರ ನಾಯ್ಕ ಕಲ್ಕರ್ಗಿ, ಅಧ್ಯಕ್ಷರು, ಕುಡುಬಿ ಸಮಾಜೋದ್ಧಾರಕ ಸಂಘ ಮೊದಲಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸುವರು.
ಸೊಸೈಟಿಯ ವಿಳಾಸ, ನಂ. 32035 ಪ್ರಧಾನ ಕಛೇರಿ: ಶಿರೂರು-ಮೂರ್ಕೈ, ಅಂಚೆ: ವಂಡಾರು, ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ-576223, ದೂರವಾಣಿ: 8970235419 Email Id: [email protected]
















