ಕಾಪು: ಕಾಪುವಿನ ಮೂರು ಸಮಾಜ ಸೇವಕರ ಸಮಾಜ ಸೇವೆಯನ್ನು ಗುರುತಿಸಿ ಇಂಟರ್ನ್ಯಾಷನಲ್ ಫೀಸ್ ಯುನಿವರ್ಸಿಟಿ ಹಾಗೂ ಏಕಾನಾಮಿ ಸೊಸೈಟಿ ಆಫ್ ಇಂಡಿಯಾ ಇವರ ರಾಷ್ಟ್ರಿಯ ಮಟ್ಟದ ಕಾರ್ಯಕ್ರಮದಲ್ಲಿ ಜನ ಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ.ಬಿ.ಶೆಟ್ಟಿ ಕಳತ್ತೂರು,
ಸಮಾಜ ಸೇವಾ ವೇದಿಕೆ ಕಾಪು ಇದರ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ, ಉಬಯ ವೇದಿಕೆ ಸಂಚಾಲಕರಾದ ದಿವಾಕರ.ಡಿ.ಶೆಟ್ಟಿ ಕಳತ್ತೂರು ಇವರನ್ನು ದೆಹಲಿಯ ದ ಪಾರ್ಕ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಪ್ರತಿಷ್ಠಿತ ಏಷ್ಯಾ ಫೆಸಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ರಾಷ್ಟ್ರಿಯ ಪ್ರಶಸ್ತಿ ಹಾಗೂ ಬಂಗಾರದ ಪದಕ ನೀಡಿ ಗೌರವಿಸಿ ಪ್ರಶಸ್ತಿ ವಿತರಿಸಿದರು.
ಈ ಸಂದರ್ಭದಲ್ಲಿ ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸಿ ಶುಭ ಹಾರೈಸಿದರು.
ಈ ವೇದಿಕೆಯಲ್ಲಿ 15 ಜನರಿಗೆ ಡಾಕ್ಟರೇಟ್ ಪದವಿ ಹಾಗೂ 9 ಜನರಿಗೆ ಸಮಾಜ ಸೇವಾ ರಾಷ್ಟ್ರಿಯ ಪ್ರಶಸ್ತಿ ನೀಡಿರುತ್ತಾರೆ ಇದರಲ್ಲಿ ಕರ್ನಾಟಕ ರಾಜ್ಯದ 4 ಜನರಿಲ್ಲಿ ಕಾಪು ಪರಿಸರದ 3 ಜನರಿಗೆ ಸಮಾಜ ಸೇವಕರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು ವಿಶೇಷ ವಾಗಿತ್ತು
ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಏನ್.ಏ.ಎಫ್.ಇ.ಡಿ ಇದರ ಆಡಳಿತ ನಿರ್ದೇಶಕ ಅಶೋಕ್ ಟಾಕೂರ್, ಭಾರತ ಸರಕಾರದ ಅರೋಗ್ಯ ಇಲಾಖೆಯ ಡೆಪ್ಯೂಟಿ ಕಮಿಶನರ್ ಡಾ|ಶುಶಿಲ್ ಕುಮಾರ್, ರಾಷ್ಟ್ರಿಯ ಸ್ವಯಂ ಸಂಘ ಆರ್.ಎಸ್.ಎಸ್ ರಾಷ್ಟ್ರಿಯ ಸ್ಟಾರ್ ಪ್ರಚಾರಕ ಡಾ|ಸುರೇಶ್ ಜೈನ್, ಹಿರಿಯ ವಿಗ್ಜಾನಿ ಏ.ಐ.ಎಂ.ಎಸ್ ಡಾ|ವಿವೇಕ್ ದೀಕ್ಷಿತ್, ಐ ಸಿ ಏ ಐ ರವೀಶ್ ಸಿಂಘಾಲ್, ಲಲಿತ್ ಕಲಾ ಏಕಾಡಮಿ ನಿರ್ದೇಶಕ ಸುನಿತಾ ಲಾಂಬಾ,
ಏರ್ ಫೋರ್ಸ್ ಕಮಾಂಡರ್ ಮೆಜರ್ ಟಿ ಸಿ ರೊಯ್, ಏಕೋನಾಮಿ ಸೊಸೈಟಿ ಆಫ್ ಇಂಡಿಯಾ ಇದರ ಅಧ್ಯಕ್ಷ ಎಸ್. ಕೆ. ಶರ್ಮ ದೆಹಲಿ, ಪ್ರದಾನ ಕಾರ್ಯದರ್ಶಿ ಸಚಿದೇವ ನವದೆಹಲಿ, ಉದ್ಯಮಿ ಜೈ ವೆಂಕಟೇಶ್ ಚನ್ನೈ, ಸಿ.ಬಿ.ಐ ಡೈರೆಕ್ಟರ್ ವಿ ಏನ್ ಸಿಘಲ್, ಹಾಗೂ ದೇಶದ ಹಿರಿಯ ವಿಗ್ಜಾನಿಗಳು ಹಾಗೂ ಹಲವು ರಾಜ್ಯದ ಸಚಿವರುಗಳು, ಅನೇಕ ಗಣ್ಯರು ಉಪಸ್ಥಿತರಿದ್ದರು