ಉಡುಪಿ: ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿ ಭಜನೆ ಕಟ್ಟಿ ಹಿರಿಯಡ್ಕ ಇದರ 45ನೇ ವರ್ಷದ ಅಖಂಡ ಏಕಾಹ ಭಜನಾ ಮಂಗಲೋತ್ಸವ ಎ.2 ರಿಂದ ಎ.13 ರ ವರೆಗೆ ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಲಿದೆ.
ಎ.2 ರಿಂದ ಸಾಯಂಕಾಲ ಗಂಟೆ 7:30 ರಿಂದ ನಿತ್ಯ ಭಜನೆ, ಎ.13 ರಂದು ಸೂರ್ಯೋದಯದಿಂದ ಏಕಾಹ ಭಜನೆ, ಮಧ್ಯಾಹ್ನ ಗಂಟೆ 12:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಎ. 14 ರಂದು ಸೂರ್ಯೋದಯಕ್ಕೆ ಮಂಗಳೋತ್ಸವ, ಸಂಜೆ ಗಂಟೆ 7ಕ್ಕೆ ಮರು ಭಜನೆ ನಡೆಯಲಿದೆ.