ಕರ್ನಾಟಕದಲ್ಲಿ ಮತ್ತೆ 12 ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆ; ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆ

ಬೆಂಗಳೂರು: ಮಂಗಳೂರಿನ ಒಬ್ಬರು ಸಹಿತ ರಾಜ್ಯದಲ್ಲಿ ಇಂದು ಒಟ್ಟು 12 ಮಂದಿ ಓಮಿಕ್ರಾನ್‌ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಹೆಚ್ಚಿನವರು ಬೆಂಗಳೂರು ಮೂಲದವರಾಗಿದ್ದು, ಬ್ರಿಟನ್‌ ಮತ್ತು ಘಾನಾದಿಂದ ನಗರಕ್ಕೆ ಮರಳಿದ್ದರು. ಹತ್ತು ಜನರು ಬೆಂಗಳೂರಿನವರು, ಮೈಸೂರು ಮತ್ತು ಮಂಗಳೂರಿನ ತಲಾ ಒಬ್ಬರು ಪ್ರಯಾಣಿಕರಿಗೆ ಓಮಿಕ್ರಾನ್ ಸೋಂಕು ತಗುಲಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್‌ ಟ್ವೀಟಿಸಿದ್ದಾರೆ.