ಕಾರ್ಕಳ: ಪ್ರಸಿದ್ಧ ಕಂಬಳ ಓಟಗಾರ ರೆಂಜಾಳ ಎಡ್ಯಾರ ಮನೆಯ ಯುವರಾಜ್ ಜೈನ್(65) ಅವರು ಹೃದಯಾಘಾತದಿಂದ ಇಂದು ನಿಧನರಾದರು.
ಅವರು ಕಳೆದ ಮೂವತ್ತು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಜೋಡುಕರೆ ಕಂಬಳದಲ್ಲಿ ಅಡ್ಡ ಹಲಗೆಯ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಪ್ರಸಕ್ತ ವರ್ಷದ ಪ್ರಥಮ ಜೋಡುಕರೆ ಕಂಬಳವಾಗಿದ್ದ ಬಂಟ್ವಾಳ ತಾಲೂಕಿನ ಹೊಕ್ಲಾಡಿಗೋಳಿಯಲ್ಲಿ ನಡೆದ ಜೋಡುಕರೆ ಬಯಲು ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ದ್ವಿತೀಯ ಬಹುಮಾನ ಇವರ ಪಾಲಿಗೆ ಲಭಿಸಿತು. ಮೃತರು ಪತ್ನಿ, ನಾಲ್ವರು ಹೆಣ್ಣು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.