ಉಡುಪಿ: ಸಮುದ್ರದ ಅಲೆಗಳ ಹೊಡೆತಕ್ಕೆ ಮಲ್ಪೆಯ ಎರಡು ಮೀನುಗಾರಿಕಾ ಬೋಟ್ ಸಿಲುಕಿ ಮುಳುಗಡೆಯಾದ ಘಟನೆ ಗೋವಾ ಪಣಜಿಯಲ್ಲಿ ಸಂಭವಿಸಿದ್ದು, ಅದರಲ್ಲಿದ್ದ ಏಳು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಮಲ್ಪೆಯ ಮಾತಾ ಜಟಗೇಶ್ವರ, ಪಲ್ಲಕ್ ಹೆಸರಿನ ಎರಡು ಬೋಟ್ ಗಳು ಮಲ್ಪೆಯಿಂದ ಗೋವಾದತ್ತ ಮೀನುಗಾರಿಕೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಬೋಟ್ ಸಿಲುಕಿದೆ. ಬೋಟಿನ ಇಂಜಿನ್ ದುರಸ್ತಿಗೊಂಡ ಪರಿಣಾಮ ಬೋಟ್ ಮುಳುಗಡೆಯಾಗಿದ್ದು, ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಕಡಲ ಪ್ರಿಯ ಹೆಸರಿನ ಬೋಟ್ ಸಹ ಮುಳುಗಡೆ ಹಂತದಲ್ಲಿದ್ದು, ಅದನ್ನೂ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.