ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ನಾಳೆಯಿಂದ (ನ.18) ಆರೋಗ್ಯ ಕಾರ್ಡ್ ಗಳ ನೋಂದಣಿ ಹಾಗೂ ನವೀಕರಣ

ಉಡುಪಿ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿ ಪರ್ಕಳ ಹಾಗೂ ವಿವಿಧ ಶಾಖೆಗಳಲ್ಲಿ ಮಣಿಪಾಲ ಕೊಂಕಣಿ ಆರೋಗ್ಯ ಕಾರ್ಡ್ (ಮಣಿಪಾಲ ಸಿಗ್ನ ಪ್ರೊ ಹೆಲ್ತ್ ಕಾರ್ಡ್ ಗಳ ನೋಂದಣಿ ಮತ್ತು ನವೀಕರಣ ಕಾರ್ಯಕ್ರಮ ನ.17ರಿಂದ ಆರಂಭಗೊಂಡಿದೆ.

ಸೊಸೈಟಿಯ ಪರ್ಕಳ ಪ್ರಧಾನ ಕಚೇರಿಯಲ್ಲಿ ನ.17ರಿಂದ 20ರ ವರೆಗೆ, ಬಂಟಕಲ್ಲು ಶಾಖೆಯಲ್ಲಿ ನ.18 ಮತ್ತು 19, ಕುಕ್ಕೆಹಳ್ಳಿ ಶಾಖೆಯಲ್ಲಿ ನ.23 ಮತ್ತು 24, ಹಿರಿಯಡಕ ಶಾಖೆಯಲ್ಲಿ ನ.25, ಮಣಿಪಾಲ ಶಾಖೆಯಲ್ಲಿ ನ.26 ಹಾಗೂ ಉಡುಪಿ ಶಾಖೆಯಲ್ಲಿ‌ ನ. 27ರಂದು ಆರೋಗ್ಯ ಕಾರ್ಡ್ ಗಳ ನೋಂದಣಿ ಮತ್ತು ನವೀಕರಣ ನಡೆಯಲಿದೆ. ನೋಂದಣಿ ಹಾಗೂ ನವೀಕರಣವು ಬೆಳಿಗ್ಗೆ 10.30ರಿಂದ 12.30ರ ವರೆಗೆ ಮತ್ತು ಮಧ್ಯಾಹ್ನ 2.30ರಿಂದ 5ಗಂಟೆಯ ವರೆಗೆ ಮಾಡಲಾಗುತ್ತದೆ ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ.

ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ ಮತ್ತು ಈಗ ಚಾಲ್ತಿಯಲ್ಲಿರುವ ಆರೋಗ್ಯ ಕಾರ್ಡ್ ಪ್ರತಿಯನ್ನು ತಪ್ಪದೇ ತರಬೇಕು. ಕಾರ್ಡಿಗೆ ₹1500 ಮತ್ತು ಒಂದು ಕಾರ್ಡಿಗೆ ಗರಿಷ್ಠ ಐದು ಮಂದಿ ಸೇರ್ಪಡೆಗೆ ಮಾತ್ರ ಅವಕಾಶ ಎಂದು ಸೊಸೈಟಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸೊಸೈಟಿಯ ದೂರವಾಣಿ ಸಂಖ್ಯೆ 0820-2545 222 ಸಂಪರ್ಕಿಸಬಹುದು.