ಮಣಿಪಾಲ: ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಇದೇ ನ.15ರಿಂದ 19ರ ವರೆಗೆ ಮಧುಮೇಹಿಗಳಿಗಾಗಿ ಉಚಿತ ಪಾದದ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ಪಾದದ ತೊಂದರೆ ಇರುವ ಮಣಿಪಾಲ್ ಆರೋಗ್ಯ ಕಾರ್ಡ್ ಹೊಂದಿದವರಿಗೆ ಶೇ. 20 ಕಡಿತದಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು. ಈ ಸಮಯದಲ್ಲಿ ಕೋವಿಡ್ನ ಎಲ್ಲಾ ಮುಂಜಾಗರೂಕತೆಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿ ಮತ್ತು ಉಚಿತ ತಪಾಸಣೆಯನ್ನು ಕಾದಿರಿಸಲು (For appointment) 0820-2923054 ನಂಬರನ್ನು ಬೆಳಗ್ಗೆ 8.30- ಸಂಜೆ 4.30 ಸೋಮವಾರದಿಂದ ಶನಿವಾರ ಸಂಪರ್ಕಿಸಬಹುದಾಗಿದೆ.