ಕಾರ್ಕಳ: ಇಲ್ಲಿನ ಜೋಡುರಸ್ತೆಯಲ್ಲಿರುವ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತುಳು ಚಿತ್ರ ನಟ ಅರವಿಂದ ಬೋಳಾರ್ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ ಪೂರ್ಣಿಮ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರವೀಂದ್ರ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಆಶಯದಂತೆ ರಾಜ್ಯದಲ್ಲಿಯೇ ಪ್ರಥಮವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದ ರವಿಪ್ರಕಾಶ್ ಪ್ರಭು ದಂಪತಿಯನ್ನು ಅಭಿನಂದಿಸಿದರು.
ಕಾರ್ಕಳ ಶಿರ್ಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ, ಶಿರ್ಡಿ ಸಾಯಿ ಕಾಲೇಜಿನ ಸ್ಥಾಪಕ ಚಂದ್ರಹಾಸ ಸುವರ್ಣ, ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ, ಉದ್ಯಮಿ ವಿಠ್ಠಲ ಶೆಟ್ಟಿ ಶುಭಹಾರೈಸಿದರು.
ಪೂರ್ಣಿಮಾ ಸಿಲ್ಕ್ಸ್ ನ ಮಾಲೀಕ ರವಿಪ್ರಕಾಶ್ ಪ್ರಭು ಅವರು ಅರವಿಂದ ಬೋಳಾರ್ ಅವರನ್ನು ಸನ್ಮಾನಿಸಿದರು. ಆನೆಕೆರೆಯ ಅಂಬಾಭವಾನಿ ತಂಡದವರಿಂದ ಕನ್ನಡ ಹಾಡುಗಳು, ವೈಷ್ಣವಿ ಮತ್ತು ಪ್ರಜ್ಞಾ ಅವರಿಂದ ನೃತ್ಯ ನಡೆಯಿತು. ಆರ್.ವರದರಾಯ ಪ್ರಭು ಕಾರ್ಯಕ್ರಮ ನಿರೂಪಿಸಿದರು.