ನೀಲಾವರ ಗೋಶಾಲೆಯಲ್ಲಿ ಜಿಪಂ‌ ಸಿಇಒರಿಂದ ಗೋಪೂಜೆ

ಬ್ರಹ್ಮಾವರ: ದೀಪಾವಳಿ ಪ್ರಯುಕ್ತ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ವೈ ನವೀನ್ ಭಟ್ ಗುರುವಾರದಂದು ನೀಲಾವರ ಗೋಶಾಲೆಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು.

ಪಶುಸಂಗೋಪನಾ ಇಲಾಖೆ ನಿವೃತ್ತ ಉಪನಿರ್ದೇಶಕರಾದ ಡಾ ಸರ್ವೋತ್ತಮ ಉಡುಪ ಮತ್ತು ಡಾ ಮಹೇಶ್ ಶೆಟ್ಟಿ , ಉಪನಿರ್ದೇಶಕ ಡಾ ಶಂಕರ ಶೆಟ್ಟಿ , ಇಲಾಖೆ ಅಪರ ಉಪನಿರ್ದೇಶಕ ಡಾ ಸಂದೀಪ್ ಶೆಟ್ಟಿ ಬ್ರಹ್ಮಾವರ ತಾಲೂಕು ಸಹಾಯಕ ನಿರ್ದೇಶಕ ಡಾ ಅರುಣ್ ಕುಮಾರ್ ಶೆಟ್ಟಿ , ಡಾ ಬ್ರಹ್ಮಾವರ ತಾಲೂಕು ಪಶುವೈದ್ಯಾಧಿಕಾರಿಗಳು ಡಾ ವಿಜಯ್ ಕುಮಾರ್ , ಡಾ ಮಂಜುನಾಥ ಅಡಿಗ ,ಸಿಬಂದಿಗಳಾದ ಶ್ರೀಧರ ನಾಯಕ್ ಬಾಲಕೃಷ್ಣ ಶೆಟ್ಟಿ , ಉದಯ ಗಾಣಿಗ ಪುರುಷೋತ್ತಮ‌ ಮಧ್ಯಸ್ಥ ಲಕ್ಷ್ಮೀನಾರಾಯಣ , ಗೋಶಾಲೆ ವ್ಯವಸ್ಥಾಪಕ ನರಸಿಂಹ ಭಟ್ , ವಾಸುದೇವ ಭಟ್ ಪೆರಂಪಳ್ಳಿ ಸುಬ್ರಹ್ಮಣ್ಯ , ಅರ್ಚಕರಾದ ರಾಘವೇಂದ್ರ ಭಟ್ ಮತ್ತು ಪ್ರಶಾಂತ್ ಭಟ್ ಪೂಜಾ ವಿಧಿ ನೆರವೇರಿಸಿ ಪ್ರಸಾದ ವಿತರಿಸಿದರು.