ಇಂದು ಆಯುರ್ವೇದ ದಿನಾಚರಣೆ. ಆಯುರ್ವೇದದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ದಿನವಿದು. ಭಾರತದ ಪಾಲಿಗೆ ಆಯುರ್ವೇದ ಎನ್ನುವುದು ನಿಜಕ್ಕೂ ಒಂದು ಹೆಮ್ಮೆಯ ಸಂಗತಿ. ಏಕೆಂದರೆ ಆಯುರ್ವೇದದ ಮೂಲವೇ ಭಾರತ. ಎಲ್ಲಕ್ಕಿಂತ ಮುಖ್ಯವಾಗಿ ಇದು ಭಾರತೀಯ ವೈದ್ಯ ಪದ್ದತಿ. ಇದರ ದೇವತೆ ಧನ್ವಂತರಿ. ದೇವಾನುದೇವತೆಗಳ ವೈದ್ಯ ಎಂದು ಧನ್ವಂತರಿಯನ್ನು ಗುರುತಿಸಲಾಗಿದೆ. ಇಂತಹ ಮಹತ್ವವನ್ನು ಪಡೆದ ಆಯುರ್ವೇದಕ್ಕೆ ಒಂದು ಕಾಲದಲ್ಲಿ ನಮ್ಮಲ್ಲಿ ಮಾತ್ರ ವಿಶಿಷ್ಠ ಸ್ಥಾನವಿತ್ತು. ಆದರೆ, ಅದು ಈಗ ಲೋಕಕ್ಕೆ ಬೆಳಕನ್ನು ನೀಡುವ ನೆಮ್ಮದಿಯನ್ನು ಕಂಡುಕೊಳ್ಳುವ ಹೊಸ ದಾರಿಯಾಗಿದೆ.
ಇಡೀ ಲೋಕವೇ ಆಯುರ್ವೇದ ವೈದ್ಯ ಪದ್ದತಿಯ ಪ್ರಭಾವಕ್ಕೊಳಗಾಗಿ ನೂರಾರು ಕಾಯಿಲೆಗಳಿಂದ ದೂರವಾಗಿದ್ದಾರೆ. ನೆಮ್ಮದಿಯ ಬದಕನ್ನು ಕಂಡುಕೊಂಡಿದ್ದಾರೆ. ಇಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.ಈ ವಿಶೇಷ ದಿನದಂದು ನೀವು ಸೇವಿಸಲೇಬೇಕಾದ ಕೆಲವೊಂದು ಆಯುರ್ವೇದ ವಸ್ತುಗಳ ಕುರಿತು ನಾವಿಲ್ಲಿ ಮಾಹಿತಿ ನೀಡಿದ್ದೇವೆ
ಅರಿಶಿನವನ್ನು ಆದಷ್ಟು ಬಳಸಿ:
ಅರಿಶಿಣವನ್ನು ನಾವು ಅಡುಗೆಗಳಲ್ಲಿ ಬಳಸುತ್ತೇವೆ. ಜೊತೆಗೆ ದಿನದಲ್ಲಿ ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದು ಒಳ್ಳೆಯದು. ಇದರಲ್ಲಿ ಸೋಂಕು ನಿವಾರಕ ಗುಣದ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಉರಿಯೂತ ಸಮಸ್ಯೆ ಕಡಿಮೆಮಾಡುತ್ತದೆ, ತ್ವಚೆ ಹೊಳಪು ಹೆಚ್ಚಿಸುತ್ತದೆ.
ಜೀರಿಗೆ ನೀರು ಆರೋಗ್ಯಕ್ಕೆ ಬೆಸ್ಟ್:
ದಿನದಲ್ಲಿ ಒಂದರಿಂದ ಎರಡು ಲೋಟ ಜೀರಿಗೆ ನೀರು ಕುಡಿಯಿರಿ. ಇದು ಹೊಟ್ಟೆ ಆರೋಗ್ಯ ವೃದ್ಧಿಸುತ್ತದೆ ಅಲ್ಲದೆ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆಮಾಡುತ್ತದೆ. ಇನ್ನು ಹೊಟ್ಟೆ ಉಬ್ಬುವುದು, ಅಜೀರ್ಣ ಈ ಸಮಸ್ಯೆ ಇರಲ್ಲ.
ಏಲಕ್ಕಿ ತಿನ್ನಿ
ಏಲಕ್ಕಿ ಏಲಕ್ಕಿ ರಕ್ತಸಂಚಲನಕ್ಕೆ ಸಹಕಾರಿ. ಇದು ರಕ್ತದಲ್ಲಿ ಸಕ್ಕರೆಯಂಶವನ್ನು ಕೂಡ ನಿಯಂತ್ರಣದಲ್ಲಿ ಇಡುತ್ತದೆ, ಆದ್ದರಿಂದ ಮಧುಮೇಹಿಗಳಿಗೆ ಏಲಕ್ಕಿ ಒಳ್ಳೆಯದು. ಇನ್ನು ಕೆಲವರಿಗೆ ಬಾಯು ದುರ್ನಾತ ಬೀರುತ್ತದೆ ಅಂಥವರು ಒಂದು ಕಾಳು ಏಲಕ್ಕಿ ಬಾಯಿಗೆ ಹಾಕಿ ಜಗಿಯುವುದು ಒಳ್ಳೆಯದು.
ಕರಿಬೇವಿನಿಂದ ರಕ್ತ ಶುದ್ದಿ:
ಕಹಿಬೇವು ಕಹಿಬೇವಿನಲ್ಲಿ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಗುಣವಿದೆ. ಇದು ರಕ್ತವನ್ನು ಕೂಡ ಶುದ್ಧೀಕರಿಸುತ್ತದೆ. ಕಾಲಿನ ಸಂಧುಗಳಲ್ಲಿ ನೋವು ಇದ್ದರೆ ಅದು ಕೂಡ ಕಡಿಮೆಯಾಗುವುದು. ದಿನದಲ್ಲಿ ಕಹಿಬೇವಿನ ಒಂದು ಎಲೆ ತಿಂದರೆ ಸಾಕು.
ನೆಲ್ಲಿಕಾಯಿ ತಿಂದ್ರೆ ಬೊಂಬಾಟ್ ಇಮ್ಯೂನಿಟಿ:
ನೆಲ್ಲಿಕಾಯಿ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಧಿಕವಿದೆ. ದಿನದಲ್ಲಿ ಒಂದರಿಂದ ಎರಡು ನೆಲ್ಲಿಕಾಯಿ ತಿಂದರೆ ನಿಮ್ಮ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಕೂದಲಿನ ಪೋಷಣೆ ಮಾಡುತ್ತದೆ. ನೆಲ್ಲಿಕಾಯಿ ಬದಲಿಗೆ ನೆಲ್ಲಿಕಾಯಿ ಜ್ಯೂಸ್ ಕೂಡ ಬಳಸಬಹುದು.
ತುಪ್ಪ ತಿನ್ನಿ ತುಪ್ಪ:
ತುಪ್ಪ ತುಪ್ಪದಲ್ಲಿ ಕೊಬ್ಬಿನಂಶವಿದೆ ಎಂದು ಕೆಲವರು ತಿನ್ನಲು ಹೆದರುತ್ತಾರೆ. ಆದರೆ ತುಪ್ಪದಲ್ಲಿರುವ ಕೊಬ್ಬಿನಂಶ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಇದು ಆಹಾರದಲ್ಲಿರುವ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚುವುದಿಲ್ಲ. ತುಪ್ಪ ಜ್ಞಾಪಕ ಶಕ್ತಿಗೂ ಒಳ್ಳೆಯದು, ತ್ವಚೆ ಹಾಗೂ ಕೂದಲಿನ ಸೌಂದರ್ಯ ಹೆಚ್ಚಿಸುತ್ತದೆ.
ಬ್ರಾಹ್ಮಿ ಎಲೆಯಿಂದ ದೇಹ ತಂಪು:
ಬ್ರಾಹ್ಮಿ ಎಲೆಯಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಬ್ರಾಹ್ಮಿಗೆ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ಶಕ್ತಿ ಇದೆ. ಇದು ದೇಹವನ್ನು ತಂಪಾಗಿ ಇಡುತ್ತದೆ. ದಿನಾ ಒಂದು ಅಥವಾಎರಡು ಎಲೆ ಬ್ರಾಹ್ಮಿ ಎಲೆ ಬಾಯಿಗೆ ಹಾಕಿ ಜಗಿಯಬಹುದು, ಬ್ರಾಹ್ಮಿ ಪುಡಿ ಬಳಸಬಹುದು.