ಉಡುಪಿ: ಪುತ್ತೂರು ಇಲ್ಲಿಯ ಬಾಳಿಗ ಪಿಶ್ ನಟ್ ಬಳಿ, ಅಸ್ವಸ್ಥಗೊಂಡು ಗದ್ದೆಯಲ್ಲಿ ಬಿದ್ದ ಅಪರಿಚಿತ ಯುವಕನನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ಬುಧವಾರ ನಡೆದಿದೆ.
ಯುವಕನು ರಾತ್ರಿ ಸಮಯದಲ್ಲಿ ನಡೆದುಕೊಂಡು ಹೋಗುವಾಗ ಅಸ್ವಸ್ಥಗೊಂಡು, ಕೆಸರು ಗದ್ದೆಯಲ್ಲಿ ಬಿದ್ದಿದ್ದು, ಬೆಳಗಿನ ಸಮಯದಲ್ಲಿ ಸ್ಥಳಿಯರ ಮೂಲಕ ವಿಷಯ ಗೊತ್ತಾಗಿದೆ. ಈ ಬಗ್ಗೆ ಸ್ಥಳಿಯ ನಗರಸಭೆ ಸದಸ್ಯೆ ಜಯಂತಿ ಕೆ ಪೂಜಾರಿ ಅವರು, ಸಮಾಜಸೇವಕರಿಗೆ ವಿಷಯ ಮುಟ್ಟಿಸಿದ್ದರು.
ತಕ್ಷಣ ಸ್ಪಂದಿಸಿದ ಸಮಾಜಸೇವಕರು ಕೆಸರುಮಯಗೊಂಡ ರೋಗಿಯನ್ನು ಸ್ನಾನ ಮಾಡಿಸಿ, ಬದಲಿ ಬಟ್ಟೆ ತೋಡಿಸಿ, ಆಸ್ಪತ್ರೆಗೆ ದಾಖಲುಪಡಿಸಿದರು. ಕಲ್ಯಾಣಪುರದ ಯುವಕನೊರ್ವ ಕಾಣೆಯಾಗಿರುವ ಬಗ್ಗೆ ಪೋಲಿಸ್ ಠಾಣಿಗೆ ದೂರು ಬಂದಿರುವ ಹಿನ್ನೆಲೆಯಲ್ಲಿ, ಕಾಣೆಯಾಗಿರುವ ವ್ಯಕ್ತಿಯ ಪತ್ತೆಗೆ ಸಹಹಕರಿಸುವಂತೆ ಪೋಲಿಸರು ಪೋಟೊವನ್ನು ಒಳಕಾಡು ಅವರಿಗೆ ರವಾನಿಸಿದ್ದರು. ಕೊನೆಗೆ ಆಸ್ಪತ್ರೆಗೆ ದಾಖಲಿಸ್ಪಟ್ಟಿರುವ ವ್ಯಕ್ತಿಯೇ ಕಾಣೆಯಾಗಿರುವ ವ್ಯಕ್ತಿ ಎಂದು ತಿಳಿದುಬಂದಿದೆ.