ನವದೆಹಲಿ: ಅಪ್ರಾಪ್ತ ಪ್ರಯಾಣಿಕರ ಪ್ರಯಾಣ ಸುರಕ್ಷತೆಗಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಬೈಕ್ ಗಳ ವೇಗಕ್ಕೆ ಮಿತಿಯ ಮೇಲೆ ಕಡಿವಾಣ ಹಾಕುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ನಾಲ್ಕು ವರ್ಷದವರೆಗಿನ ಮಕ್ಕಳನ್ನು ಮೋಟಾರ್ ಸೈಕಲ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಬೈಕ್ ಗಳ ವೇಗದ ಮಿತಿ ಪ್ರತಿ ಗಂಟೆಗೆ 40 ಕಿ.ಮೀ. ದಾಟುವಂತಿಲ್ಲ ಹಾಗೂ 9 ತಿಂಗಳಿನಿಂದ 4 ವರ್ಷ ಪ್ರಾಯದ ಮಕ್ಕಳು ಕ್ರ್ಯಾಶ್ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂಬುದರ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಸಚಿವಾಲಯವು ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ, 4 ವರ್ಷದ ಒಳಗಿನ ಮಗುವನ್ನು ಮೋಟಾರ್ ಬೈಕಿನಲ್ಲಿ ಸಾಗಿಸುವ ವೇಳೆ ವೇಗದ ಮಿತಿ ಗಂಟೆಗೆ 40 ಕಿಲೋಮೀಟರ್ ಮೀರಬಾರದು. ಅಲ್ಲದೇ 9 ತಿಂಗಳಿನಿಂದ 4 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಕ್ರ್ಯಾಶ್ ಹೆಲ್ಮೆಟ್ ಹಾಕಿಸಬೇಕು ಎಂದು ಸಚಿವಾಲಯ ಹೇಳಿದೆ.
ಮಕ್ಕಳು ಧರಿಸುವ ಈ ಸುರಕ್ಷತಾ ಸರಂಜಾಮು ಕೋಟ್ ರೀತಿಯಲ್ಲಿ ಇರಲಿದ್ದು ಇದನ್ನು ಮಗುವಿನ ಅಳತೆಗೆ ತಕ್ಕಂತೆ ಸರಿಹೊಂದಿಸಬಹುದಾಗಿದೆ. ಈ ಧಿರಿಸಿಗೆ ಅಳವಡಿಸಲಾದ ಪಟ್ಟಿಗಳನ್ನು ಚಾಲಕ ಧರಿಸಬೇಕು. ಈ ಮೂಲಕ ಮಗು ಬೈಕ್ ನಲ್ಲಿ ಸುರಕ್ಷಿತವಾಗಿ ಇರಲಿದೆ ಎಂದು ಸಚಿವಾಲಯ ವಿವರಿಸಿದೆ.