ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ನಾಲ್ಕು ತಂಡಗಳು ‘ಸೂಪರ್-12’ ಹಂತಕ್ಕೆ ಲಗ್ಗೆ ಇಟ್ಟಿವೆ.
ಸೂಪರ್-12 ಪ್ರವೇಶಿಸಿದ ತಂಡಗಳು ಇಂತಿದೆ:
ಗುಂಪು ‘ಎ’: ಶ್ರೀಲಂಕಾ ಹಾಗೂ ನಮೀಬಿಯಾ
ಗುಂಪು ‘ಬಿ’: ಸ್ಕಾಟ್ಲೆಂಡ್ ಹಾಗೂ ಬಾಂಗ್ಲಾದೇಶ
ನಿರ್ಗಮಿಸಿದ ತಂಡಗಳು:
ಗುಂಪು ‘ಎ’: ಐರ್ಲೆಂಡ್ ಹಾಗೂ ನೆದರ್ಲೆಂಡ್ಸ್
ಗುಂಪು ‘ಬಿ’: ಒಮನ್ ಹಾಗೂ ಪಪುವಾ ನ್ಯೂಗಿನಿ
‘ಎ’ ಗುಂಪಿನ ಅಗ್ರಸ್ಥಾನಿಯಾಗಿರುವ ಶ್ರೀಲಂಕಾ, ಸೂಪರ್-12ರ ಹಂತದಲ್ಲಿ ‘ಗ್ರೂಪ್ 1’ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಅತ್ತ ‘ಬಿ’ ಗುಂಪಿನ ಅಗ್ರ ತಂಡ ಸ್ಕಾಟ್ಲೆಂಡ್ ‘ಗ್ರೂಪ್ 2’ರಲ್ಲಿ ಕಾಣಿಸಿಕೊಂಡಿದೆ. ‘ಎ’ ಗುಂಪಿನ ಎರಡನೇ ತಂಡ ನಮೀಬಿಯಾ ‘ಗ್ರೂಪ್ 2’ ಅನ್ನು ಮತ್ತು ‘ಬಿ’ ಗುಂಪಿನ ಎರಡನೇ ತಂಡ ಬಾಂಗ್ಲಾದೇಶ ‘ಗ್ರೂಪ್ 1’ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.
ಇದರೊಂದಿಗೆ ಭಾರತ ಇರುವ ‘ಗ್ರೂಪ್ 2’ಕ್ಕೆ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳು ಲಗ್ಗೆಯಿಟ್ಟಿವೆ. ಭಾರತವು ನವೆಂಬರ್ 5ರಂದು ಸ್ಕಾಟ್ಲೆಂಡ್ ಹಾಗೂ ನ. 8ರಂದು ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿವೆ.
‘ಗ್ರೂಪ್ 1′ ತಂಡಗಳು ಇಂತಿದೆ:
ಆಸ್ಟ್ರೇಲಿಯಾ,
ಇಂಗ್ಲೆಂಡ್,
ದಕ್ಷಿಣ ಆಫ್ರಿಕಾ,
ವೆಸ್ಟ್ಇಂಡೀಸ್,
ಶ್ರೀಲಂಕಾ,
ಬಾಂಗ್ಲಾದೇಶ,
‘ಗ್ರೂಪ್ 2′ ಇಂತಿದೆ:
ಭಾರತ,
ಪಾಕಿಸ್ತಾನ,
ನ್ಯೂಜಿಲೆಂಡ್,
ಅಫ್ಗಾನಿಸ್ತಾನ,
ಸ್ಕಾಟ್ಲೆಂಡ್
ನಮೀಬಿಯಾ,
ಸೂಪರ್-12 ಹಂತದಲ್ಲಿ ‘ಗ್ರೂಪ್ 1’ ಹಾಗೂ ‘ಗ್ರೂಪ್ 2’ರ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿವೆ. ಬಳಿಕ ಫೈನಲ್ ನವೆಂಬರ್ 14 ಭಾನುವಾರ ದುಬೈಯಲ್ಲಿ ನಡೆಯಲಿದೆ.
ಭಾರತದ ಪಂದ್ಯಗಳ ವೇಳಾಪಟ್ಟಿ ಇಂತಿದೆ:
ಅ. 24: ಭಾರತ vs ಪಾಕಿಸ್ತಾನ, ದುಬೈ
ಅ. 31: ಭಾರತ vs ನ್ಯೂಜಿಲೆಂಡ್, ದುಬೈ
ನ. 03: ಭಾರತ vs ಅಫ್ಗಾನಿಸ್ತಾನ, ಅಬುಧಾಬಿ
ನ. 05: ಭಾರತ vs ಸ್ಕಾಟ್ಲೆಂಡ್, ದುಬೈ
ನ. 08: ಭಾರತ vs ನಮೀಬಿಯಾ, ದುಬೈ