ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಪ್ತ ಎಂಆರ್ ಉಮೇಶ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಐಟಿ ರೇಡ್ ಮಾಡಿದ ಸಂದರ್ಭದಲ್ಲಿಯೇ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ಆಪ್ತ ಗೆಳೆಯನ ಮನೆಯ ಮೇಲೆಯೂ ಐಟಿ ದಾಳಿ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.
ಬಿ ವೈ ವಿಜಯೇಂದ್ರ ಆಪ್ತ ಹಾಗೂ ಗೆಳೆಯ ಅರವಿಂದ ಮನೆ ಮೇಲೆ ನಿನ್ನೆ ದಾಳಿ ನಡೆದಿದೆ. ಅರವಿಂದ್ ಮತ್ತು ವಿಜಯೇಂದ್ರ ಕ್ಲಾಸ್ ಮೇಟ್ಸ್. ವಸಂತ ನಗರದಲ್ಲಿ ವಾಸವಿರುವ ಅರವಿಂದ ಮನೆ ಮೇಲೆ ಐಟಿ ರೇಡ್ ನಡೆದಿತ್ತು. ಅರವಿಂದ್ ಜಯನಗರದಲ್ಲಿ ಸ್ವಂತ ಮನೆ ಹೊಂದಿದ್ದಾರೆ.
ಹೊಸ ಮನೆ ಕಟ್ಟುವ ಕಾರಣಕ್ಕೆ ಅರವಿಂದ್ ವಸಂತ ನಗರ ಮನೆಗೆ ಶಿಫ್ಟ್ ಆಗಿದ್ದರು. ಪ್ರಸ್ತುತ ಅರವಿಂದ್ ದುಬೈಗೆ ತೆರಳಿದ್ದರು. ಆದರೆ ಇಂದು ದುಬೈನಿಂದ ಬೆಂಗಳೂರಿಗೆ ವಾಪಸಾಗಿದ್ದಾರೆ. ಇಂದು ಅರವಿಂದ ಸಮ್ಮಖದಲ್ಲಿ ಐಟಿ ಅಧಿಕಾರಿಗಳ ತಂಡ ಮನೆಯನ್ನು ಸರ್ಚ್ ಮಾಡಲಿದೆ.
ರಾಜ್ಯದಲ್ಲಿ ನಡೆಯುತ್ತಿರೊ ಐಟಿ ದಾಳಿ ಈ ಹಿಂದೆ ನಡೆದಿರೊ ದಾಳಿಗಳಿಗಿಂತ ಭಿನ್ನವಾಗಿದೆ ಎನ್ನಲಾಗಿದೆ. ಇದು ಸಂಪೂರ್ಣವಾಗಿ ಸೆಂಟ್ರಲೈಜಡ್ ( centralised) ದಾಳಿಯಾಗಿ ನಡೆಯುತ್ತಿದೆ. ಹೆಸರಿಗೆ ಬೆಂಗಳೂರು ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ದಾಳಿ ನಡೆಯುತ್ತಿರೊ ಪ್ರತಿಯೊಂದು ತಂಡವನ್ನೂ ಲೀಡ್ ಮಾಡ್ತಿರೋದು ದೆಹಲಿ ಅಫೀಸರ್ಸ್.
ಇಲ್ಲಿಂದ ದಾಳಿ ವಿವರಗಳು ಸಂಪೂರ್ಣ ನೇರವಾಗಿ ದೆಹಲಿಗೆ ರವಾನೆಯಾಗುತ್ತಿದೆ. ಮಿನಿಸ್ಟರಿ ಆಫ್ ಫಿನಾನ್ಸ್ ಗೆ ಐಟಿ ಅಧಿಕಾರಿಗಳು ವರದಿ ನೀಡ್ತಿದಾರೆ. ಅಂದರೆ ಮಿನಿಸ್ಟಿರಿ ಆಫ್ ಫಿನಾನ್ಸ್ ಈ ದಾಳಿಯನ್ನು ನೇರವಾಗಿ ಮಾನಿಟರ್ ಮಾಡ್ತಿದೆ. ದಾಳಿ ಅಂತ್ಯದ ಬಳಿಕ ಮಿನಿಸ್ಟರಿ ಆಫ್ ಫಿನಾನ್ಸ್ ದೆಹಲಿ ಕೇಂದ್ರ ಕಚೇರಿಯಿಂದಲೇ ಪತ್ರಿಕ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.