ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಇಂದಿನಿಂದ ಅ. 15ರ ವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ.
ನವರಾತ್ರಿ ಉತ್ಸವದ ಪ್ರಯುಕ್ತ 9 ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇಗುಲದಲ್ಲಿ ನೆರವೇರಲಿದೆ. ಚಂಡಿಕಾಯಾಗ, ರಥೋತ್ಸವ, ನವರಾತ್ರಿ ಕಲ್ಪೋಕ್ತ ಪೂಜೆ, ವಿಶೇಷ ಹೂವಿನ ಪೂಜೆ ಜರುಗಲಿದೆ.
ಅ.7 ರಂದು ನವರಾತ್ರಿ ಆರಂಭ ವಿಶೇಷ ಪೂಜೆ, ಅ. 8 ರಂದು ಕದಿರು ಕಟ್ಟುವುದು. ಅ.10ಕ್ಕೆ ಲಲಿತ ಪಂಚಮಿ, ಅ.12ಕ್ಕೆ ಶಾರದ ಪೂಜಾ ಕಾರ್ಯಕ್ರಮ, ಅ.13 ರಂದು ದುರ್ಗಾಷ್ಟಮಿ ಮಹಾ ಚಂಡಿಕಾಹೋಮ ಮತ್ತು ಅ.14 ಮತ್ತು 15 ರಂದು ಕನ್ನಿಕಾ ಪೂಜೆ, ಮಹಾಮಂತ್ರಾಕ್ಷತೆ, ವಿಜಯ ದಶಮಿ, ಶಾರದ ವಿಸರ್ಜನೆ ನಡೆಯಲಿದೆ.
ಪ್ರತಿದಿನ ಸಂಜೆ 6 ರಿಂದ 7 ಗಂಟೆವರೆಗೆ ವಿವಿಧ ಸಂಘ, ಸಂಸ್ಥೆಗಳಿಂದ ಭಜನಾ ಕಾರ್ಯಕ್ರಮ ಜರಗಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.