ಸಂಕಷ್ಟದಲ್ಲಿರುವ ಸಾಹಿತಿ, ಕಲಾವಿದರುಗಳಿಗೆ ಮಾಸಾಶನ: ಅರ್ಜಿ ಆಹ್ವಾನ

ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತ್ಯ, ಸಂಗೀತ, ನೃತ್ಯ., ನಾಟಕ, ದೈವಾರಾದನೆ, ಜಾನಪದ, ಯಕ್ಷಗಾನ, ಲಲಿತಕಲೆ ಮತ್ತು ಶಿಲ್ಪಕಲೆ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಗಣನೀಯವಾಗಿ ಸೇವೆ ಸಲ್ಲಿಸಿದಂತಹ ಆಸಕ್ತ ಸಾಹಿತಿ-ಕಲಾವಿದರಿಗೆ ಆರ್ಥಿಕ ನೆರವು ನೀಡಲು ಅರ್ಜಿ ಅಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ಕನಿಷ್ಟ 58 ವರ್ಷ ವಯೋಮಾನದವರಾಗಿರಬೇಕು, ಅಂಗವಿಕಲರಾಗಿದ್ದಲ್ಲಿ 40 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ವಾರ್ಷಿಕ ಆದಾಯವು 1 ಲಕ್ಷ ರೂ ಮೀರಿರದೆ, 20 ವರ್ಷ ಕಲಾ ಸೇವೆ ಸಲ್ಲಿಸಿರಬೇಕು.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2986168 ಅಥವಾ ಸಂಪರ್ಕಿಸುವAತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.