ಉಡುಪಿ: ವೃತ್ತಿ ಸಂಸ್ಥೆಯ ವತಿಯಿಂದ 5 ದಿನಗಳ ತಾಂತ್ರಿಕ ತರಬೇತಿ ಮತ್ತು 2 ದಿನಗಳ ವ್ಯಾಪಾರ ಅಭಿವೃದ್ಧಿ ಕುರಿತ ತರಬೇತಿಯನ್ನು ಸುರತ್ಕಲ್, ಮುಲ್ಕಿಯಲ್ಲಿ ಹಮ್ಮಿಕೊಳ್ಳಲಾಗುವುದು.
ಈ ತರಬೇತಿಯಲ್ಲಿ ಒಟ್ಟು 15-30 ಮಂದಿಗೆ ಭಾಗವಹಿಸಲು ಅವಕಾಶವಿದೆ.
ಮಾನದಂಡಗಳು:
1. ಸ್ವಂತ ಪಾರ್ಲರ್ ಮನೆ ಅಥವಾ ನಿಶ್ಚಿತ ಸ್ಥಳದಲ್ಲಿರಬೇಕು. ಅಭಿವೃದ್ಧಿ ಹೊಂದುವ ಇಚ್ಛೆ ಇರಬೇಕು. 6 ತಿಂಗಳಿನಿಂದ ಪಾರ್ಲರ್ ನಡೆಸುತ್ತಿರಬೇಕು. ಸುರತ್ಕಲ್, ಮುಲ್ಕಿಯ ನಿವಾಸಿಗಳಾಗಿರಬೇಕು.
2. ವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು. (ಇಂತಹ ಪಾರ್ಲರ್ ಮಹಿಳೆಯರ ಅಭಿವೃದ್ಧಿ Godrej ಕಂಪನಿಯ ಉದ್ದೇಶವಾಗಿದೆ)
ಆಯ್ಕೆ: ನಿಗದಿತ ಸ್ಥಳದಲ್ಲಿ ಒಂದು ದಿನ ನಡೆಸುವ orientation ನಲ್ಲಿ ನಿರ್ಧಾರವಾಗುವುದು.
ಮೊದಲು ಕರೆ ಮಾಡಿ ಹೆಸರು ನೊಂದಾಯಿಸುವ 30 ಮಂದಿ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ನಂತರ ಸೇರ್ಪಡೆಗೆ ಅವಕಾಶವಿಲ್ಲ.
ಹೆಚ್ಚಿನ ಮಾಹಿತಿಗೆ ಅರ್ಪಿತಾ ಬ್ರಹ್ಮಾವರ ಮೊಬೈಲ್ ಸಂಖ್ಯೆ 98869 83190 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.