ವಿಶ್ವದ ಮೊದಲ LCommerce ಸಂಸ್ಥೆ eSamudaay. LCommerce ಸ್ಥಳೀಯ ಸ್ವಾಮ್ಯದ ಮತ್ತು ಕಾರ್ಯನಿರ್ವಹಿಸುವ ಡಿಜಿಟಲ್ ವೇದಿಕೆಯಿದು, ಉಡುಪಿಯಂತಹ ಪಟ್ಟಣದ ಉತ್ಪಾದನೆ, ಖರೀದಿ ಮತ್ತು ವ್ಯಾಪಾರವನ್ನು ಬೆಳೆಸುವ ಹಾಗೂ ಭದ್ರಗೊಳಿಸುವ ದಾರಿಯಿದು.
eSamudaay ಒಂದು ಸಾಫ್ಟ್ವೇರ್ ಸೇವೆಯ ವೇದಿಕೆ. ಇದು ಸ್ಥಳೀಯ ಉದ್ಯಮಿಗಳಿಗೆ LCommerce ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ಬೆಳೆಸಲು ನೂತನ ದಾರಿಯಾಗಿದೆ. ಜೊತೆಗೆ ಈ ಡಿಜಿಟಲ್ ಸಾಧನದ ಮೂಲಕ ವ್ಯಾಪಾರಿಗಳು ಹೆಚ್ಚು ಜನರನ್ನು ತಲುಪಬಹುದು ಎನ್ನುವುದು ವಿಶೇಷ.
ಏನಿದೆ ವಿಶೇಷ?
ಈ ಆ್ಯಪ್ ಕಳೆದ 6 ತಿಂಗಳಿಂದ 80 ವ್ಯಾಪಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಮೂರು ಸಾವಿರಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ.
ಉಡುಪಿಯ ಜನರು ಈಗ ಕಿರಾಣಿ, ರೆಸ್ಟೋರೆಂಟ್ ಆಹಾರ, ಕೃಷಿ ಉತ್ಪನ್ನಗಳು, ಮೀನು, ಮಾಂಸ, ಔಷಧೀಯ ಸೇವೆಗಳ ವಿತರಣೆಗಳನ್ನು ಮತ್ತು ಎಲ್ಲಾ ರೀತಿಯ ದಿನ ಹಾಗು ಗ್ರಹ ಬಳಕೆಯ ವಸ್ತುಗಳನ್ನು ಮತ್ತು ಇತರ ಸೇವೆಗಳನ್ನು eSamudaay ಆ್ಯಪ್ ಮೂಲಕ ಪಡೆಯಬಹುದು.
ಜೊತೆಗೆ ಪ್ರವಾಸೋದ್ಯಮ, ಉತ್ಪಾದಕ ಸೇವೆ, ಸಮುದಾಯ ನಿರ್ಮಾಣ, ಸಾಂಸ್ಕ್ರತಿಕ ಸೇವೆಗಳು ಕೂಡ ಲಭ್ಯವಾಗಲಿದೆ.
ಈ ರೀತಿಯ ಆ್ಯಪ್ ಮೂಲಕ ಸ್ಥಳೀಯ ವ್ಯಾಪಾರ ವ್ಯವಹಾರಗಳಿಗೆ ಒತ್ತು ಸಿಗುತ್ತದೆ, ಸ್ಥಳೀಯ ಆರ್ಥಿಕತೆಯೂ ವೃದ್ಧಿಸುತ್ತದೆ. ಸ್ಥಳೀಯ ಉದ್ಯೋಗಾವಕಾಶಗಳನ್ನು ಮತ್ತು ಸ್ವ-ಉದ್ಯೋಗಿಗಳನ್ನು ಬೆಂಬಲಿಸುತ್ತದೆ.
ಈ ಸಂಸ್ಥೆಯು ಉಡುಪಿಯಲ್ಲಿ ಪ್ರಾರಂಭವಾಗಿ ಈಗ ಭಾರತದ ಬೆಂಗಳೂರು, ಮೈಸೂರು, ನಂಜನಗೂಡು, ಉತ್ತರ ಪ್ರದೇಶ, ಶಿಲಾಂಗ್ ಮೊದಲಾದ 9 ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಉಡುಪಿಯ ಅಡುಗೆ, ಸಂಸ್ಕ್ರತಿ, ಪರಂಪರೆ, ಭಾರತೀಯ ವೈದ್ಯ ಪದ್ದತಿ, ಪ್ರವಾಸೋಧ್ಯಮವನ್ನು ವಿಶ್ವಕ್ಕೆ ಪರಿಚಯಿಸುವ ಆ್ಯಪ್ ಇದಾಗಬೇಕೆನ್ನುವುದು ಸಂಸ್ಥಾಪಕರಾದ ಅನೂಪ್ ಪೈ ಅವರ ಆಶಯ. ಲಾಕ್ಡೌನ್ ಸಮಯದಲ್ಲಿ ವ್ಯಾಪಾರಿಗಳು ಗ್ರಾಹಕರೊಂದಿಗೆ ವ್ಯವಹರಿಸಲು ಅನುವು ಮಾಡಿಕೊಟ್ಟಿದ್ದು ಅಗತ್ಯವಸ್ತುಗಳನ್ನು ಮನೆಮನೆಗೆ ತಲುಪಿಸುವಲ್ಲಿ eSamudaay ಯಶಸ್ವಿಯಾಗಿದೆ.