ಹಾಲು ಮತ್ತು ಖರ್ಜೂರಗಳನ್ನ ಒಟ್ಟಿಗೆ ಸೇವಿಸುವುದರಿಂದ ಆಗುವ ಪ್ರಯೋಜನಗಳು ಹಲವು. ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಅಪಾರ ಪ್ರಯೋಜನಗಳಿವೆ. ಅದರಲ್ಲೂ ಪುರುಷರು ಈ ಆಹಾರ ತಿಂದರೆ ಅವರ ದೇಹ ಸಶಕ್ತವಾಗಿರಲು ಸಹಕಾರಿ. ಹಾಲನ್ನು ಸಂಪೂರ್ಣ ಆಹಾರ ಹೇಗೋ ಹಾಗೇ ಖರ್ಜೂರ ಕೂಡ ಒಂದು ಸಹ ಸೂಪರ್ ಫುಡ್.
ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳು ಸಮೃದ್ಧವಾಗಿರುವ ಹಾಲು ಮತ್ತು ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಮೃದ್ಧವಾಗಿರುವ ಖರ್ಜೂರಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.ಒಂದು ವಿಧದ ಹುಮ್ಮಸ್ಸನ್ನು ಕೂಡ ನೀಡುತ್ತದೆ.
ಖರ್ಜೂರಗಳನ್ನು ಹಾಲಿನಲ್ಲಿ ನೆನೆಸಿ ಸ್ವಲ್ಪ ಸಮಯದ ಬಳಿಕ ಕುಡಿಯಬೇಕು. ಅದರ ಆರೋಗ್ಯ ಪ್ರಯೋಜನಗಳು 100 ಪಟ್ಟು ಹೆಚ್ಚಾಗುತ್ತದೆ. ರಕ್ತಹೀನತೆಯಂತಹ ರೋಗ ಕೂಡ ಗುಣವಾಗುತ್ತದೆ.