ಉಡುಪಿ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಮಂಜೂರಾಗಿರುವ ಆಹಾರ ಸಾಮಗ್ರಿಗಳ ಕಿಟ್ ಗಳಲ್ಲಿ ಯಾವುದೇ ದುರುಪಯೋಗ ಆಗಿಲ್ಲ. ಬಹುತೇಕ ಕಿಟ್ ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ್ ನಾಯಕ್ ಹೇಳಿದ್ದಾರೆ.
ಅಲೆವೂರು ಗ್ರಾಪಂ ಅಧ್ಯಕ್ಷೆ ಪುಷ್ಪ ಅಂಚನ್ ಅವರು ತನ್ನ ವಿರುದ್ಧ ಮಾಡಿರುವ ‘ಕಟ್ಟಡ ಕಾರ್ಮಿಕರ ಕಿಟ್ ದುರುಪಯೋಗ ಆರೋಪಕ್ಕೆ’ ಸ್ಪಷ್ಟನೆ ನೀಡಿದರು.
ಅಲೆವೂರು ಗ್ರಾಪಂ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಮಂಜೂರಾಗಿರುವ 200 ಕಿಟ್ ಗಳನ್ನು ಶಾಸಕರ ಆದೇಶದಂತೆ ತೆಗೆದುಕೊಂಡು ಬಂದು ಕಾರ್ಮಿಕರಿಗೆ ಹಂಚಲಾಗಿದೆ. ಶಾಸಕರ ನೇತೃತ್ವದಲ್ಲಿ ಪಂಚಾಯತ್ ಪಿಡಿಒ, ಕಾರ್ಮಿಕ ಅಧಿಕಾರಿಗಳ ಸಮ್ಮುಖದಲ್ಲಿ 113 ಮಂದಿ ಕಾರ್ಮಿಕರಿಗೆ ಕಿಟ್ ವಿತರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಿಟ್ ಗಳನ್ನು ಸ್ವೀಕರಿಸಿರುವ ಕಾರ್ಮಿಕರ ದಾಖಲೆ ಇದೆ. ಅವುಗಳನ್ನು ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಕೊಟ್ಟಿದ್ದೇವೆ. ಅವುಗಳನ್ನು ಗ್ರಾಪಂ ಅಧ್ಯಕ್ಷರು ಪರಿಶೀಲಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.