ಉಡುಪಿ: “ಸಮಾನ ನಾಗರಿಕ ಸಂಹಿತೆ” ಕಾನೂನು ಜಾರಿಯ ಮೂಲಕ ಉತ್ತರ ಪ್ರದೇಶ ಮತ್ತು ಅಸ್ಸಾಂ ಸರಕಾರಗಳು ಜನಸಂಖ್ಯಾ ನಿಯಂತ್ರಣ ನೀತಿಯನ್ನು ಜಾರಿಗೆ ತರಲು ಮುಂದಾಗಿರುವ ಕ್ರಮವನ್ನು ಉಡುಪಿ ಜಿಲ್ಲಾ ಶ್ರೀರಾಮಸೇನೆ ಸ್ವಾಗತಿಸಿದೆ.
ಪ್ರಸ್ತುತ ಸಮಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯು ಅವಶ್ಯಕತೆ ಇದೆಯೆಂದು ಕೇಂದ್ರ ಸರಕಾರಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯ ಸೂಚಿಸಿದ ಕೆಲವೇ ಘಂಟೆಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ “ನೂತನ ಜನಸಂಖ್ಯಾ ನೀತಿ” ಕರಡನ್ನು ಜಾರಿಗೆ ತರಲು ಮುಂದಾಗಿರುವುದು ಅತ್ಯಂತ ಸಂತೋಷದ ವಿಷಯವೆಂದು ಸಂಘಟನೆಯ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಈಗ ಸರಕಾರದ ದಾಖಲೆಯಲ್ಲಿ ಮಾತ್ರ ಹಿಂದುಗಳು ಬಹುಸಂಖ್ಯಾತರಾಗಿದ್ದು, ಸರಕಾರದ ವಿವಿಧ ಯೋಜನೆಗಳಲ್ಲಿ ಬಲಿಪಶುಗಳಾಗುತ್ತಿದ್ದಾರೆ. ಅಲ್ಪಸಂಖ್ಯಾತರು ಎಂದು ಹಣೆಪಟ್ಟಿ ಹೊತ್ತವರು ಈಗ ಬಹುಸಂಖ್ಯಾತರಾಗಿದ್ದರೂ ಸಹ ಸರಕಾರ ಅವರಿಗೆ ಎಲ್ಲಾ ವಿಧದಲ್ಲೂ ಮಿಸಲಾತಿ, ರಿಯಾಯಿತಿ ನೀಡಿ ಉತ್ತೇಜಿಸುತ್ತದೆ.
ಕುಟುಂಬ ಯೋಜನೆ ಎಂಬ ಕಾನೂನು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿದ್ದು, ಬಹುಸಂಖ್ಯಾತರಿಗೆ ಅದರಿಂದ ರಾಜಕೀಯವಾಗಿ ವಿನಾಯಿತಿ ಕೊಟ್ಟಿರುವುದರಿಂದ ಜನಸಂಖ್ಯಾ ಸ್ಪೋಟಕ್ಕೆ ಸರಕಾರಗಳೇ ನೇರ ಕಾರಣವಾಗಿದೆ.
ಈಗಾಗಲೇ ಕೆಲವೊಂದು ದೇಶದ್ರೋಹಿ ಸಂಘಟನೆಗಳು ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಹುನ್ನಾರ ನಡೆಸುತ್ತಿರುವ ಪ್ರಸ್ತುತ ಸಮಯದಲ್ಲಿ, ಅದಿತ್ಯನಾಥ್ ಅವರ ಈ ಕಾನೂನು ಬಹಳ ಮಹತ್ವದ್ದಾಗಿದೆ ಮತ್ತು ಇದನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಕೂಡಲೇ ಜಾರಿಗೊಳಿಸಬೇಕು.
ಹಿಂದುತ್ವ ಹೆಸರಿನಲ್ಲಿ, ಹಿಂದೂ ದೇವರ ಹೆಸರಿನಲ್ಲಿ ಮತ ಪಡೆದು ಅಧಿಕಾರ ಪಡೆದ ಕರ್ನಾಟಕ ರಾಜ್ಯ ಸರಕಾರವು ನಿಜವಾಗಿಯೂ ಹಿಂದುತ್ವಕ್ಕೆ ಬೆಲೆ ಕೊಡುವುದಾದರೆ ಹಾಗೂ ಜನಸಂಖ್ಯಾ ಸ್ಪೋಟವನ್ನು ನಿಯಂತ್ರಿಸುವುದಾದರೆ ಯುಪಿ ಸರ್ಕಾರ ಜಾರಿಗೆ ತಂದಿರುವ ‘ಸಮಾನ ನಾಗರಿಕ ಸಂಹಿತೆ” ಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕು ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆಯ ಅಧ್ಯಕ್ಷ ಜಯರಾಂ ಅಂಬೆಕಲ್ಲು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.