ಕಾರ್ಕಳ: ರಾಷ್ಟ್ರ ರಕ್ಷಣೆಗಾಗಿ ಪ್ರಾಣದ ಹಂಗನ್ನು ತೊರೆದು ದೇಶ ಸೇವೆಯನ್ನು ಮಾಡುತ್ತಿರುವ ವೀರ ಸೈನಿಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಅವಹೇಳನಕಾರಿ ಪೋಸ್ಟ್ ಮಾಡಿದ ರಾಧಾಕೃಷ್ಣ ಎಂಬ ವ್ಯಕ್ತಿಯನ್ನು ಕಾರ್ಕಳ ಪೋಲೀಸರು ವಿಚಾರಣೆ ಮಾಡಿದ ಸಂದರ್ಭದಲ್ಲಿ ಅದನ್ನು ವಿರೋಧಿಸಿ, ಆತನನ್ನು ಬೆಂಬಲಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಖಂಡನೀಯ.
ಈ ನೆಲದ ಅಸ್ಮಿತೆ, ಧರ್ಮ ಸ್ಥಾಪನೆಗಾಗಿ ಹೋರಾಡಿದ ಶಿವಾಜಿ ಮಹಾರಾಜರು ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ಮತಾಂತರದ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡಿದ ಭಗವಾನ್ ಬಿರ್ಸಾ ಮುಂಡಾ ಆದಿಯಾಗಿ ದೇಶಕ್ಕಾಗಿ ಹೋರಾಟ ಮಾಡಿದಂತಹ ಮಹಾನ್ ನಾಯಕರ ಬಗ್ಗೆ ಗೌರವ ಇಲ್ಲದಿರುವುದು ಕಾಂಗ್ರೆಸಿನ ನಿಲುವು ಪ್ರಶ್ನಾರ್ಹವಾಗಿದೆ.
ರಾಧಾಕೃಷ್ಣ ಎಂಬವರನ್ನು ತನಿಖೆಗಾಗಿ ಪೋಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿರುವುದು ಪೋಲೀಸ್ ಇಲಾಖೆಯ ಕ್ರಮ ಶ್ಲಾಘನೀಯ ಹಾಗೂ ವಿಚಾರಣೆ ನಡೆಸಿದ ಪೊಲೀಸರ ನೈತಿಕ ಸ್ಥೌರ್ಯ ಕುಗ್ಗಿಸುವ ಪ್ರಯತ್ನ ನಡೆಸಿರುವುದು ರಾಧಾಕೃಷ್ಣನನ್ನು ರಕ್ಷಿಸುವ ಹುನ್ನಾರವಾಗಿದೆ. ಈ ಪ್ರಕರಣದಲ್ಲಿ ಆತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಕಾರ್ಕಳ ಕ್ಷೇತ್ರದ ಎಸ್ ಟಿ ಮೋರ್ಚಾದ ಅಧ್ಯಕ್ಷ ಕೆಪಿ ನಾಯ್ಕ್ ಹಾಗೂ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಆಗ್ರಹಿಸಿದ್ದಾರೆ.