ಉಡುಪಿ: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ್ (ಪದ್ದು) ಬಂಗೇರಾ (74 ) ಕೊರೊನಾ ಸೋಂಕಿನಿಂದ ನಿಧನ ಹೊಂದಿದರು.
ಅವರು ಕೊರೊನಾ ಸೋಂಕಿಗೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಶೇಖರ್ ಪದ್ದು ಮೂಲತಃ ಉಡುಪಿ ತಾಲೂಕಿನ ಬಡಾನಿಡಿಯೂರಿನವರು. 80ರ ದಶಕದಲ್ಲಿ ದೇಶದ ಫುಟ್ಬಾಲ್ ತಂಡವನ್ನು ಮುನ್ನಡೆಸಿದ್ದರು. ಭಾರತ ತಂಡದ ಗೋಲ್ ಕೀಪರ್ ಹಾಗೂ ಕ್ಯಾಪ್ಟನ್ ಕೂಡ ಆಗಿದ್ದರು.












