ಉಡುಪಿ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಸೊಂಟ ಮತ್ತು ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಅವರು ಸ್ವಲ್ಪ ನಡೆಯಬೇಕಾದರೂ ಸ್ಟ್ಯಾಂಡ್ ಅವಲಂಬಿಸಬೇಕಾಗಿತ್ತು.
ಹೀಗಾಗಿ ಜಯಸೂರ್ಯ ಚಿಕಿತ್ಸೆಗಾಗಿ ಶ್ರೀಲಂಕಾದ ಕೊಲಂಬೊದ ಪ್ರತಿಷ್ಟಿತ ನವಲೋಕ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಅಲ್ಲಿ ಅವರಿಗೆ ಪರಿಹಾರ ಸಿಗಲ್ಲ. ಆ ಬಳಿಕ ಚಿಕಿತ್ಸೆಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲಿಯೂ ಗುಣವಾಗುವುದಿಲ್ಲ. ಬಳಿಕ ಜಯಸೂರ್ಯರ ಅನಾರೋಗ್ಯದ ವಿಷಯ ತಿಳಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಆಯುರ್ವೇದ ಗಿಡಮೂಲಿಕೆಗಳಿಂದ ಚಿಕಿತ್ಸೆ ನೀಡುವ ಡಾ. ಪ್ರಕಾಶ್ ಟಾಟಾ ಅವರಿಂದ ಚಿಕಿತ್ಸೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಅಜರುದ್ದೀನ್ ಸಲಹೆಯಂತೆ ಜಯಸೂರ್ಯ ಮುಂಬೈಗೆ ಬಂದು ಡಾ. ಟಾಟಾ ಅವರ ನಿವಾಸಕ್ಕೆ ತೆರಳಿ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದರು. ನಂತರ ಡಾ. ಟಾಟಾ ಜಯಸೂರ್ಯರನ್ನು ಪರೀಕ್ಷಿಸಿ ಅವರನ್ನು ಗುಣಪಡಿಸುವ ಭರವಸೆ ನೀಡಿದರು.
ಜಯಸೂರ್ಯ ಅವರನ್ನ ವಾಪಸ್ ಶ್ರೀಲಂಕಾಗೆ ಕಳುಹಿಸಿ ಇನ್ನೊಬ್ಬ ವೈದ್ಯ ಮಾಕನ್ ವಿಶ್ವಕರ್ಮ ಅವರೊಟ್ಟಿಗೆ ಒಂದು ವಾರ ಪಾತಾಳ್ಕೊಟ್ ನ ದಟ್ಟವಾದ ಕಾಡಿನಲ್ಲಿ ಒಂದು ವಾರ ಅಲೆದು ಗಿಡಮೂಲಿಕೆಗಳನ್ನು ಸಂಗ್ರಹಿಸಿ ಅದನ್ನು ಚಿಂದ್ವಾಡಕ್ಕೆ ತಂದು ಔಷಧವನ್ನು ತಯಾರಿಸಿದರು.
ಚಿಂದ್ವಾಡಾದಿಂದ 78 ಕಿ.ಮೀ ದೂರ ಇರುವ ಪಾತಾಳ್ಕೊಟ್ ನ ಕಾಡು ಗಿಡಮೂಲಿಕೆಗಳನ್ನು ತುಂಬಿದೆ. ಅಪರೂಪದ ಗಿಡಮೂಲಿಕೆಗಳ ಭಂಡಾರವೇ ಈ ಕಾಡಿನಲ್ಲಿ ಇದೆ ಅಂತ ಹೇಳಲಾಗುತ್ತದೆ. ಒಟ್ಟಾರೆ 89 ಚದರ ಕಿ.ಮೀ ವ್ಯಾಪ್ತಿಯಲ್ಲಿರುವ ಈ ಕಣಿವೆ 1,700 ಅಡಿ ಆಳದಲ್ಲಿದೆ. ಇಲ್ಲಿ ಸೂರ್ಯನ ಕಿರಣ ತಲುಪುದು ಮಧ್ಯಾಹ್ನ 12 ಗಂಟೆಗೆ ಮಾತ್ರ. ಇಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಗಿಡಮೂಲಿಕೆಗಳನ್ನು ಉಪಯೋಗಿಸಿ ಬೇರೆ ಕಡೆ ಗುಣಪಡಿಸಲಾಗದ ರೋಗವನ್ನೆಲ್ಲ ವಾಸಿ ಮಾಡ್ತಾರೆಂದು ಹೇಳಲಾಗುತ್ತದೆ.
ಗಿಡಮೂಲಿಕೆ ಸಂಗ್ರಹಿಸಿದ ನಂತರ ಡಾ. ಪ್ರಕಾಶ್ ಟಾಟಾ ಸಹೋದ್ಯೋಗಿ ಜೈಹೋ ಫೌಂಡೇಶನ್ ಅಧ್ಯಕ್ಷ ತರುಣ್ ತಿವಾರಿ ಅವರೊಂದಿಗೆ ಶ್ರೀಲಂಕಾಕ್ಕೆ ತೆರಳಿದರು. ಶ್ರೀಲಂಕಾ ತಲುಪಿದ ನಂತರ, ಜಯಸೂರ್ಯ ಅವರಿಗೆ ಚಿಕಿತ್ಸೆಯನ್ನು ಆರಂಭಿಸಿ ಕೇವಲ 72 ಗಂಟೆಗಳನ್ನು ತೆಗೆದುಕೊಂಡು ಜಯಸೂರ್ಯನನ್ನು ಅವರ ಕಾಲ ಮೇಲೆ ಅವರು ನಿಲ್ಲುವಂತೆ ಮಾಡ್ತಾರೆ.
ಮೆಲ್ಬೋರ್ನ್ ಹಾಗೂ ನವಲೋಕ್ ಆಸ್ಪತ್ರೆಯಲ್ಲಿ ಆಧುನಿಕ ವಿಜ್ಞಾನ ಮಾಡಲಾಗದ ಕೆಲಸವನ್ನು ಭಾರತದ ಆಯುರ್ವೇದ ಮಾಡಿ ತೋರಿಸಿದೆ.