ಗಂಗೊಳ್ಳಿ: ಪೊಲೀಸ್ ಸಿಬ್ಬಂದಿಗೆ ಸಿಗಂಧೂರೇಶ್ವರಿ ಡ್ಯಾನ್ಸ್ ಅಕಾಡೆಮಿಯಿಂದ ರೋಗನಿರೋಧಕ ಔಷಧಿ ವಿತರಣೆ

ಗಂಗೊಳ್ಳಿ ಮೇ12: ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಜನರಿಗೋಸ್ಕರ ತಮ್ಮ ಪರಿವಾರದಿಂದ ದೂರವಿದ್ದು ಕಾನೂನು ವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಸಾರ್ವಜನಿಕರಿಗೆ ಇನ್ನಷ್ಟು ಉತ್ತಮವಾದ ಸೇವೆಯನ್ನು ನೀಡಲಿ ಎಂದು ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಬಗ್ಗೆ ಕಾಳಜಿವಹಿಸಿ  ಶ್ರೀ  ಸಿಗಂಧೂರೇಶ್ವರಿ ಡಾನ್ಸ್ ಅಕಾಡೆಮಿ(ರಿ.) ಗಂಗೊಳ್ಳಿ ಇದರ ಸಂಚಾಲಕರಾದ ಗೋಪಾಲ್ ಚಂದನ್ ರವರು ಗಂಗೊಳ್ಳಿ ಠಾಣೆಯ ನೂತನ ಅಧಿಕಾರಿಗಳಾದ ಶ್ರೀಯುತ ನಂಜಾ ನಾಯ್ಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಅಲ್ಲದೆ ತಮ್ಮ ಮಗಳಾದ ವೈಷ್ಣವಿ ಗೋಪಾಲ್ ರವರ ಜನ್ಮ ದಿನವನ್ನು  ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಆಯುಷ್ ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳಾದ ಚ್ಯವನ್ ಪ್ರಾಶ್, ಆಯುಷ್ ಕ್ವಾಥ, ಸಂಶಮನಿ ವಟಿಗಳನ್ನು ನೀಡಿ  ವಿಭಿನ್ನ ರೀತಿಯಲ್ಲಿ ಆಚರಿಸಿದ್ದು ಶ್ಲಾಘನೀಯ.
ಈ ಸಂದರ್ಭದಲ್ಲಿ ಡಾ. ವೀಣಾ ಕಾರಂತ್ ಅಧ್ಯಕ್ಷರು ಕರ್ನಾಟಕ ಆಯುಷ್ ವೈದ್ಯಾಧಿಕಾರಿಗಳ ಸಂಘ, ಉಡುಪಿ ಘಟಕ.  ಕೋವಿಡ್- 19 ಮುಂಜಾಗ್ರತಾ ಕ್ರಮಗಳ ಬಗ್ಗೆ ಮತ್ತು ಔಷಧಿ ಸೇವನೆ ಬಗ್ಗೆ ಮಾಹಿತಿ ನೀಡಿದರು. ಗೋಪಾಲ್ ಚಂದನ್, ವೈಷ್ಣವಿ ಗೋಪಾಲ್, ಠಾಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.