ಆರೋಗ್ಯದ ದೃಷ್ಟಿಯಿಂದ ನುಗ್ಗೆಯು ಬಹಳ ಒಳ್ಳೆಯದು.ಇದರಲ್ಲಿ ಅಯಾನ್ ಮತ್ತು ಕ್ಯಾಲ್ಷಿಯಂ ಅಧಿಕ ವಿರುವುದರಿಂದ ಮೂಳೆಗೆ ಹಾಗೂ ಅನಿಮಿಯ ಇರುವವರಿಗೆ ಇದು ಸೂಪರ್. ಇದು ನಮ್ಮ ಬ್ಲಡ್ ಶುಗರ್ ಹಾಗೂ ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿರಿಸುತ್ತದೆ. ನಮ್ಮ ಇಮ್ಯುನಿಟಿ ಜಾಸ್ತಿ ಮಾಡಲು ಇದು ಸಹಾಯಕ . ಈಗ ನುಗ್ಗೆಯ ಕಾಲವಾದುದರಿಂದ ನುಗ್ಗೆಕಾಯಿ, ಹೂವು ಹಾಗೂ ಸೊಪ್ಪುಗಳನ್ನುಬಳಸಿ ರುಚಿಯಾದ ಅಡುಗೆ ಮಾಡಬಹುದು .ನುಗ್ಗೆಯಿಂದ ಮಾಡುವ ನಾಲ್ಕು ರೆಸಿಪಿಗಳನ್ನು ಕಾರ್ಕಳದ ಡಾ. ಹರ್ಷಾ ಕಾಮತ್ ಹೇಳಿಕೊಟ್ಟಿದ್ದಾರೆ. ಇನ್ನಷ್ಟು ರೆಸಿಪಿಗಳನ್ನು ಮುಂದಿನ ಸರಣಿಯಲ್ಲಿ ನಿರೀಕ್ಷಿಸಿ.
ನುಗ್ಗೆ ಹೂವಿನ ಪಕೋಡ
ಏನೇನ್ ಬೇಕು?
ಎರಡು ಕಪ್ ನುಗ್ಗೆ ಹೂವು, ಅರ್ಧ ಕಪ್ ಕಾರ್ನ್ ಫ್ಲೋರ್,ಎರಡು ಚಮಚ ಮೆಣಸಿನ ಹುಡಿ, ಒಂದು ಚಮಚ ಗರಂಮಸಾಲೆ,ಉಪ್ಪು ರುಚಿಗೆ ತಕ್ಕಷ್ಟು
ಹೇಗ್ ಮಾಡೋದು?
ಹೂವನ್ನು ನೀರಿನಲ್ಲಿ ಉಪ್ಪು ಹಾಕಿ ಒಂದು ಗಂಟೆ ಇಡಿ .ಒಂದು ಗಂಟೆಯ ನಂತರ ಅದನ್ನು ಬಿಸಾಡಿ ಶುಚಿಗೊಳಿಸಿ ಸ್ವಲ್ಪ ಹಿಸುಕಿ ಅದಕ್ಕೆ ಮಿಕ್ಕೆಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲೆಸಿ ಡೀಪ್ ಫ್ರೈ ಮಾಡಿ. ಪಕೋಡ ರೆಡಿ .
ನುಗ್ಗೆ ಹೂವಿನ ಪಲ್ಯ
ಏನೇನ್ ಬೇಕು?
ನುಗ್ಗೆ ಹೂವು ಎರಡು ಕಪ್,ಬೇಯಿಸಿದ ಬಟಾಣಿ ಒಂದು ಕಪ್, ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದು ಚಮಚ ಗರಂ ಮಸಾಲ, ಅರ್ಧ ಚಮಚ ಕೊತ್ತಂಬರಿ ಪುಡಿ,ಅರ್ಧ ಚಮಚ ಜೀರಿಗೆ ಪುಡಿ, ಅರ್ಧ ಚಮಚ ಕೆಂಪುಮೆಣಸಿನ ಪುಡಿ,ಎರಡು ಈರುಳ್ಳಿ,ಎರಡು ಟೊಮೆಟೊ,ಉಪ್ಪು ರುಚಿಗೆ ತಕ್ಕಷ್ಟು
ಮಾಡೋದ್ ಹೇಗೆ?
ನುಗ್ಗೆ ಹೂವನ್ನು ಶುಚಿಗೊಳಿಸಿ ಮಿಕ್ಸಿಯಲ್ಲಿ ಸ್ವಲ್ಪ ಗ್ರೈಂಡ್ ಮಾಡಿ .ಈರುಳ್ಳಿ ಮತ್ತೆ ಟೊಮೆಟೊವನ್ನು ಸಣ್ಣಗೆ ಹಚ್ಚಿಕೊಳ್ಳಿ . ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪಗೆಯಾಗುವ ತನಕ ಹುರಿಯಿರಿ .ನಂತರ ಟೊಮೆಟೊ ನುಗ್ಗೆ ಹೂವು ಮತ್ತೆ ಉಳಿದ ಎಲ್ಲಾ ಮಸಾಲೆಗಳನ್ನು ಹಾಕಿ ಒಂದು ನಿಮಿಷ ಹುರಿಯಿರಿ . ಒಂದು ಕಪ್ ನೀರನ್ನು ಹಾಕಿ ಬೇಯಿಸಿದ ಬಟಾಣಿಯನ್ನು ಹಾಕಿ ಐದು ನಿಮಿಷ ಲ್ಲೆಯಲ್ಲಿ ಹಿಡಿಯಿರಿ ಪಲ್ಯ ರೆಡಿ ಇದು ಚಪಾತಿ ಪೂರಿ ಜೊತೆ ತಿನ್ನಲು ಬಲು ರುಚಿ .
ನುಗ್ಗೆ ಹೂವಿನ ಮಸಾಲೆ ವಡೆ
ಏನೇನ್ ಬೇಕು?
ನುಗ್ಗೆ ಹೂ ಒಂದು ಕಪ್,ಎರಡು ಕಪ್ ಕಡ್ಲೆ ಬೇಳೆ, ಎರಡು ಹಸಿಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಮೂರು ಬೆಳ್ಳುಳ್ಳಿಯ ಬೀಜ, ಸಣ್ಣ ತುಂಡು ಶುಂಠಿ, ಕರಿಬೇವು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು
ಮಾಡೋದ್ ಹೇಗೆ?
ನುಗ್ಗೆ ಹೂವನ್ನು ಶುಚಿಗೊಳಿಸಿ .ಕಡಲೆ ಬೇಳೆಯನ್ನು ನಾಲ್ಕು ಗಂಟೆ ನೀರಿನಲ್ಲಿ ನೆನೆಸಿಡಿ .ನಂತರ ತೊಳೆದು ತರಿತರಿಯಾಗಿ ರುಬ್ಬಿರಿ. ಇದಕ್ಕೆ ಹೆಚ್ಚಿದ ಕರಿಬೇವು .ಕೊತ್ತಂಬರಿ ಸೊಪ್ಪು,ಹಸಿಮೆಣಸಿನ ಕಾಯಿ, ಶುಂಠಿ ,ಬೆಳ್ಳುಳ್ಳಿ ಹಾಕಿ ಕಲಸಿರಿ. ಚಿಕ್ಕಚಿಕ್ಕ ಉಂಡೆಗಳನ್ನು ಮಾಡಿಚಪ್ಪಟೆ ಮಾಡಿ ಎಣ್ಣೆಯಲ್ಲಿ ಕರಿಯಿರಿ.ನುಗ್ಗೆ ಹೂವಿನ ಮಸಾಲೆ ವಡೆ ಸಿದ್ಧ .
ನುಗ್ಗೆಕಾಯಿಯ ರವಾ ಫ್ರೈ
ಏನೇನ್ ಬೇಕು?
ನುಗ್ಗೆ ಕಾಯಿಮೂರು ಕಪ್,ಮೆಣಸಿನ ಪುಡಿ ಒಂದು ಚಮಚ, ಕಾರ್ನ್ ಫ್ಲೋರ್ ಐದು ಚಮಚ .
ಸಣ್ಣ ರವೆ ಅರ್ಧ ಕಪ್,ರುಚಿಗೆ ತಕ್ಕಷ್ಟು ಉಪ್ಪ
ಮಾಡೋದ್ ಹೇಗೆ?
ಹೆಚ್ಚಿದ ನುಗ್ಗೆಕಾಯಿಗೆ, ಉಪ್ಪು, ಮೆಣಸಿನ ಪುಡಿ, ಕಾನ್ ಫ್ಲೋರ್ , ಸ್ವಲ್ಪ ನೀರು ಹಾಕಿ ಕಲಸಿರಿ. ಇದನ್ನು ಸಣ್ಣ ರವಿಯ ಮೇಲೆ ಹೊರಳಿಸಿ ಎಣ್ಣೆಯಲ್ಲಿ ಕರೆಯಿರಿ ನುಗ್ಗೆ ಕಾಯಿಯರವಾ ಫ್ರೈ ರೆಡಿ .ಇದು ತಿನ್ನಲು ಬಲು ರುಚಿ .
ಚಿತ್ರ-ಬರಹ: ಡಾ. ಹರ್ಷಾ ಕಾಮತ್, ಕಾರ್ಕಳ