ಶ್ರೀ ರಾಮಸೇನೆ ಉಡುಪಿ ಜಿಲ್ಲೆ ಮತ್ತು ಶ್ರೀ ರಾಮಸೇನೆ ಮಣಿಪಾಲ ಘಟಕ ವತಿಯಿಂದ. ಇಂದು ಸಂಜೆ 5:00ಗಂಟೆಗೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಮೆರವಣಿಗೆ ಮೂಲಕ ಸಾಗಿ ಬಂದು ಟೈಗರ್ ಸರ್ಕಲ್ ನಲ್ಲಿ, ಭಾರತದ ವಾಯುಪುತ್ರ ಸಿಂಹದ ಮರಿ ಅಭಿನಂದನ್ ವರ್ಧಮಾನ್ ರವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು, ಮಧುಕರ ಮುದ್ರಾಡಿ, ನವೀನ್ ರಾವ್ ಮಾತನಾಡಿದ್ದರು. ಈ ಸಂದರ್ಭದಲ್ಲಿ ಮಣಿಪಾಲಘಟಕಾಧ್ಯಕ್ಷರಾದ ಹರೀಶ್ ಪೂಜಾರಿ,ಶ್ರೀ ರಾಮಸೇನೆಯ ಮುಖಂಡರಾದ ಶರತ್ ಪೂಜಾರಿ, ಸುನಿಲ್ ಶೆಟ್ಟಿ, ಯಶವಂತ್ ಮಣಿಪಾಲ, ದಿನೇಶ್ ಪಾಂಗಳ, ನಿತೇಶ್ ಪೂಜಾರಿ, ಉಪಸ್ಥಿತರಿದ್ದರು.