ದೂರದರ್ಶನ ನಿರೂಪಕಿ ಕಾನುಪ್ರಿಯಾ ಕೋವಿಡ್ ಸೋಂಕಿನಿಂದ ಮೃತ್ಯು

ನವದೆಹಲಿ: ದೂರದರ್ಶನ ವಾಹಿನಿ ಟಿವಿ ನಿರೂಪಕಿ ಕಾನುಪ್ರಿಯಾ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೋವಿಡ್‍ನಿಂದ ಅಸ್ವಸ್ಥರಾಗಿದ್ದ ಕಾನುಪ್ರಿಯಾಳನ್ನು 11 ಸೆಕ್ಟರ್ ನೋಯ್ಡಾದಲ್ಲಿ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೋವಿಡ್ ಸೋಂಕು ಶ್ವಾಸಕೋಶಕ್ಕೆ ತಗುಲಿತ್ತು. ಹೀಗಾಗಿ ಕಡಿಮೆ ಆಮ್ಲಜನಕ ಮಟ್ಟ ಮತ್ತು ತೀವ್ರ ಜ್ವರದಿಂದಾಗಿ ಕಾನುಪ್ರಿಯಾ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕಾನುಪ್ರಿಯ ಕೇವಲ ನ್ಯೂಸ್ ಆ್ಯಂಕರ್ ಮಾತ್ರವಲ್ಲ, ನಟಿ ಹಾಗೂ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಆಧ್ಯಾತ್ಮಿಕ ಗುರು ಮತ್ತು ಬ್ರಹ್ಮ ಕುಮಾರಿ ಸೋದರಿ ಬಿ.ಕೆ. ಶಿವಾನಿ ಕಾನುಪ್ರಿಯಾ ನಿಧನ ವಾರ್ತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೋವಿನಿಂದ ಹಂಚಿಕೊಂಡಿದ್ದಾರೆ.