ಮತದಾನೋತ್ತರ ಸಮೀಕ್ಷೆ: ತಮಿಳುನಾಡಿನಲ್ಲಿ ಡಿಎಂಕೆಗೆ ಪ್ರಚಂಡ ಬಹುಮತ, ಕೇರಳದಲ್ಲಿ ಎಡರಂಗಕ್ಕೆ ಅಧಿಕಾರ ಸಾಧ್ಯತೆ

ನವದೆಹಲಿ: ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದೆ.
ತಮಿಳುನಾಡಿನಲ್ಲಿ ಆಡಳಿತರೂಢ ಎಐಎಡಿಎಂಕೆ ಹಿನ್ನಡೆ ಅನುಭವಿಸಲಿದ್ದು, ಪ್ರತಿಪಕ್ಷ ಡಿಎಂಕೆ ಅಧಿಕಾರಕ್ಕೆ ಬರುವ ಸಾಧತ್ಯೆ ಇದೆ ಎಂದು ಬಹುತೇಕ ಸಮೀಕ್ಷೆ ಹೇಳಿವೆ.

ರಿಪಬ್ಲಿಕ್ ಟಿವಿ-ಸಿಎನ್ಎಕ್ಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 160 ರಿಂದ 170 ಸ್ಥಾನಗಳೊಂದಿಗೆ ಸ್ಟಾಲಿನ್ ನೇತೃತ್ವದ ಡಿಎಂಕೆ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದೆ.
ಇಂಡಿಯಟುಡೇ ಆಕ್ಸಿಸ್ ಕೂಡ ಡಿಎಂಕೆ ಪ್ರಚಂಡ ಬಹುಮತಗಳೊಂದಿಗೆ ಒಂದು ದಶಕಗಳ ಬಳಿಕ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದೆ. ಅಇಂಡಿಯಟುಡೇ ಆಕ್ಸಿಸ್
ಎಐಎಡಿಎಂಕೆ+ 38-54
ಡಿಎಂಕೆ + 175-195
ಇತರೆ 1-7

ಎಐಎಡಿಎಂಕೆ ಮೈತ್ರಿ -58-68
ಡಿಎಂಕೆ ಮೈತ್ರಿ -160-170
ಎಎಂಎಂಕೆ ಮೈತ್ರಿ -4-6

ಪಿ-ಮಾರ್ಕ್ ಸಮೀಕ್ಷೆ ಪ್ರಕಾರ
ಎಐಎಡಿಎಂಕೆ ಮೈತ್ರಿ -40-65
ಡಿಎಂಕೆ ಮೈತ್ರಿ -165-190
ಎಎಂಎಂಕೆ ಮೈತ್ರಿ -1-3

ಕೇರಳ
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಪಿಣರಾಯ್ ವಿಜಯನ್ ನೇತೃತ್ವದ ಎಡರಂಗ ಸರ್ಕಾರವು ಎರಡನೇ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ.

140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಏಪ್ರಿಲ್ 6 ರಂದು ಚುನಾವಣೆ ನಡೆದಿದ್ದು, ಭಾನುವಾರ ಫಲಿತಾಂಶ ಪ್ರಕಟವಾಗಲಿದೆ.

ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ
ಎಲ್ ಎಎಫ್: 104-120
ಯುಡಿಎಫ್: 20-36
ಎನ್‌ಡಿಎ: 0-2

ರಿಪಬ್ಲಿಕ್-ಸಿಎನ್ಎಕ್ಸ್ ಪ್ರಕಾರ
ಎಲ್ ಡಿಎಫ್: 72-80
ಯುಡಿಎಫ್: 58-64
ಎನ್‌ಡಿಎ: 1-5

ಅಸ್ಸಾಂ
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ, ಅಸ್ಸಾಂ ಒಟ್ಟು 126 ಸ್ಥಾನಗಳಲ್ಲಿ 75-85 ಸ್ಥಾನಗಳನ್ನು ಬಿಜೆಪಿ ಪಡೆಯುವ ನಿರೀಕ್ಷೆಯಿದೆ. ಮತ್ತೊಂದೆಡೆ, ಕಾಂಗ್ರೆಸ್ 40-50 ಸ್ಥಾನಗಳನ್ನು ಪಡೆಯುತ್ತದೆ ಮತ್ತು ಇತರರು 1-4 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ.

ಟುಡೇಸ್ ಚಾಣಕ್ಯ ಕೇಸರಿ ಮೈತ್ರಿಕೂಟಕ್ಕೆ 70 ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಕ್ಕೆ 56 ಸ್ಥಾನಗಳನ್ನು ಪಡೆಯಲಿದೆ. ಆದಾಗ್ಯೂ, ‘ಪೀಪಲ್ಸ್ ಪಲ್ಸ್’ ನಡೆಸಿದ ಪೋಸ್ಟ್ ಪೋಲ್ ಸಮೀಕ್ಷೆಯಂತೆ, ಬಿಜೆಪಿ 43-48 ಸ್ಥಾನಗಳು ಮತ್ತು ಕಾಂಗ್ರೆಸ್ 38-43 ಸ್ಥಾನಗಳನ್ನು ಪಡೆಯಲಿದೆ.