ಮತದಾನೋತ್ತರ ಸಮೀಕ್ಷೆ: ಬಂಗಾಳದಲ್ಲಿ ದೀದಿ ಮತ್ತೆ ಮೇಲುಗೈ, ಬಿಜೆಪಿಗೆ ಹಿನ್ನಡೆ

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ವಿವಿಧ ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ.

ಹಲವು ಸಮೀಕ್ಷೆಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮತದಾರ ಈ ಬಾರಿಯೂ ಮಮತಾ ಬ್ಯಾನರ್ಜಿ ಕೈಹಿಡಿಯುವ ಸಾಧ್ಯತೆ ಇದ್ದು, ದೀದಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿವೆ.

ಎಬಿಪಿ ಸಿ-ವೋಟರ್ ಸಮೀಕ್ಷೆಯಲ್ಲಿ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಗೆಲುವು ಮುನ್ಸೂಚನೆ ನೀಡಿದೆತಿಳಿಸಿದ 152 ರಿಂದ 164 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದರೆ, ಬಿಜೆಪಿ 109 ರಿಂದ 121 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್-ಎಡ ಮೈತ್ರಿ 14 ರಿಂದ 25 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ರಿಪಬ್ಲಿಕ್-ಸಿಎನ್ಎಕ್ಸ್ ಸಮೀಕ್ಷೆಯ ಪ್ರಕಾರ, 294 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 138-148 ಸ್ಥಾನಗಳನ್ನು ಮತ್ತು ಟಿಎಂಸಿ 128-138 ಸ್ಥಾನಗಳನ್ನು ಗಳಿಸಲಿದೆ.

ಇನ್ನು ಟೈಮ್ಸ್ ನೌ-ಸಿ ವೋಟರ್ ಸಮೀಕ್ಷೆಯಲ್ಲಿ ಪಕ್ಷಕ್ಕೆ ಟಿಎಂಸಿಗೆ 162 ಮತ್ತು ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಆಡಳಿತರೂಢ ಟಿಎಂಸಿ ಸ್ಪಷ್ಟ ಬಹುಮತ ಪಡೆಯಲಿದೆ.

ಆದರೆ ಇಂಡಿಯ ಟುಡೇ ಆಕ್ಸಿಸ್ ವಿಭಿನ್ನ ಫಲಿತಾಂಶ ನೀಡಿದ್ದು, ಬಿಜೆಪಿ ಹಾಗೂ ಟಿಎಂಸಿ ಮಧ್ಯೆ ತೀವ್ರ ಪೈಪೋಟಿ ಏರ್ಪಡಲಿದೆ. ಎರಡು ಪಕ್ಷಗಳು ಎರಡ್ಮೂರು ಸ್ಥಾನಗಳಿಂದ ಸರಳ ಬಹುಮತ ಪಡೆಯಬಹುದು ಎಂದು ತಿಳಿಸಿದೆ. ಟಿಎಂಸಿ 130-156 ಸ್ಥಾನ ಪಡೆದರೆ, ಬಿಜೆಪಿ 134-160 ಸ್ಥಾನ ಪಡೆಯಬಹುದು ಎಂದು ಹೇಳಿದೆ. ಉಳಿದಂತೆ ಕಾಂಗ್ರೆಸ್- ಸಿಪಿಎಂ: 0-02 ಹಾಗೂ ಇತರೆ- 0-1 ಪಡೆಯಬಹುದು ಎಂದು ತಿಳಿಸಿದೆ.