ಉಡುಪಿ: ದೇಶದಲ್ಲಿ ಕೊರೊನಾದ ಎರಡನೇ ಅಲೆಯು ಭೀಕರತೆಯನ್ನು ಸೃಷ್ಟಿಸುತ್ತಿದ್ದು, ಅನೇಕ ರಾಜ್ಯಗಳಲ್ಲಿ ಈಗಾಗಲೇ ಲಾಕ್ – ಡೌನ್ ನಂತಹ ಕಠಿಣ ನಿಯಮಗಳನ್ನು ಸರಕಾರಗಳು ಜಾರಿಗೊಳಿಸಿವೆ.
ಕೋವಿಡ್ ಸೋಂಕಿತರಿಗೆ ಬೇಕಾದ ಅಗತ್ಯ ವಸ್ತುಗಳಾದ ರೆಮ್ಡಿಸಿವಿರ್, ವೆಂಟಿಲೇಟರ್ , ಲಸಿಕೆ ಗಳನ್ನು ಪೂರೈಸಲು ಸರಕಾರ ಪ್ರಯತ್ನಿಸುತ್ತಿದೆ. ಆದರೆ ಕೋವಿಡ್ ವಿರುದ್ಧ ಹೋರಾಟ ಕೇವಲ ಸರಕಾರದ ಜವಾಬ್ದಾರಿ ಮಾತ್ರವಲ್ಲ. ಕೊರೊನಾದ ಎರಡನೇ ಅಲೆಯ ಗಂಭೀರತೆಯನ್ನು ಅರಿತು ಸರಕಾರದ ಆದೇಶ ಮಾಸ್ಕ್ , ಸಾಮಾಜಿಕ ಅಂತರ, ಲಾಕ್ – ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ದೇಶದಿಂದ ಕೊರೊನಾವನ್ನು ಹೊರಹಾಕುವ ಸಂಕಲ್ಪ ಮತ್ತು ಜವಾಬ್ದಾರಿ ದೇಶದ ಜನತೆಗೂ ಇದೆ ಎಂದು ಸಾಮಾಜಿಕ ಕಾರ್ಯಕರ್ತ ರಾಕೇಶ್ ಬಿರ್ತಿ ಅಭಿಪ್ರಾಯಪಟ್ಟಿದ್ದಾರೆ.