ಉಡುಪಿ: ಪೇಜಾವರದ ಮಠದ ವಿಶ್ವೇಶತೀರ್ಥರು, ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು ಮತ್ತು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಗುರುವಾರ ರಾತ್ರಿ ಮಣಿಪಾಲದ ಚಿತ್ರಮಂದಿರದಲ್ಲಿ ” ಉರಿ ” ಚಿತ್ರವನ್ನು ವೀಕ್ಷಿಸಿದರು.
ಸ್ವಾಮೀಜಿಗಳಿಗಾಗಿ ಚಿತ್ರ ವೀಕ್ಷಣೆಗೆಂದು ವಿಶೇಷವಾಗಿ ವ್ಯವಸ್ಥೆ ಮಾಡಲಾಗಿತ್ತು. ಸಿನಿಮಾ ವೀಕ್ಷಿಸಿ ಮಾತನಾಡಿದ ಶ್ರೀಗಳು, ಸೈನಿಕರ ವೀರಗಾಥೆಯನ್ನು ಬಿಂಬಿಸುವ ದೇಶಪ್ರೇಮದ ಕಥಾನಕ ಈ ಚಿತ್ರ ಎಂದು ಹೇಳಿದರು.
ಸೈನಿಕ ಮತ್ತು ಸಂತನ ಬದುಕು ಸಮಾಜಕ್ಕೆ ಮುಡಿಪಾಗಿರುತ್ತದೆ. ಸೈನಿಕರ ವೀರತ್ವಕ್ಕೆ ನೈತಿಕ ಬೆಂಬಲ ಕೊಡುವುದು ಕರ್ತವ್ಯ ಆಗಬೇಕೆಂಬ ಆಶಯದಿಂದ ಚಿತ್ರ ವೀಕ್ಷಿಸಿದ್ದೇವೆ. ಸಂತೋಷವಾಗಿದೆ ಎಂದು ಸೋದೆ ಶ್ರೀ ಅಭಿಪ್ರಾಯ ಪಟ್ಟಿದ್ದಾರೆ.