ಪಾಕಿಸ್ತಾನದ ವಶದಲ್ಲಿರುವ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ಸರ್ಕಾರ ಹೇಳಿಕೆ ನೀಡಿದೆ. ಭಾರತ ಮತ್ತು ಅಂತರಾಷ್ಟ್ರಿಯ ಸಮುದಾಯದ ಬಲವಾದ ಒತ್ತಡಕ್ಕೆ ಅಂತಿಮವಾಗಿ ಮಣಿದ ಪಾಕಿಸ್ತಾನ, ಅಭಿನಂದನ್ ಅವರನ್ನು ಬಿಡುಗಡೆಮಾಡಲು ನಿರ್ಧರಿಸಿದೆ. “ನಮ್ಮ ವಶದಲ್ಲಿರುವ ಅಭಿನಂದನ್ ಸುರಕ್ಷಿತವಾಗಿದ್ದಾರೆ.ಅವರನ್ನು ಮರಳೀ ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ಇಬ್ರಾನ್ ಖಾನ್, ಪಾಕಿಸ್ತಾನದ ವಿದೇಶಾಂಗ ಸಚಿವೆ ಮೊಹಮ್ಮದ್ ಖುರೇಶಿ ಸುದ್ದಿ ಸಂಸ್ಥೆಗಳಿಗೆ ಹೇಳಿಕೆ ನೀಡಿದ್ದಾರೆ.


















