ಮಣಿಪಾಲ: ಇಲ್ಲಿನ ಸಿಂಡಿಕೇಟ್ ಸರ್ಕಲ್ ಬಳಿ ಇಂದು ಮಧ್ಯಾಹ್ನ ಜಲ್ಲಿ ಸಾಗಾಟದ ಟಿಪ್ಪರ್ ಮತ್ತು ಕಾರು ಮಧ್ಯೆ ನಡೆದ ಅಪಘಾತದಲ್ಲಿ ಟಿಪ್ಪರ್ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಟಿಪ್ಪರ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಮಗುಚಿಬಿದ್ದಿದೆ.
ಜಲ್ಲಿ ತುಂಬಿದ ಟಿಪ್ಪರ್ ಮಣಿಪಾಲದಿಂದ ಪೆರಂಪಳ್ಳಿ ಕಡೆಗೆ ಹೋಗುತ್ತಿದ್ದು, ಕಾರು ಉಡುಪಿಯಿಂದ ಮಣಿಪಾಲಕ್ಕೆ ಬರುತ್ತಿತ್ತು ಎನ್ನಲಾಗಿದೆ. ಟಿಪ್ಪರ್ ಸಿಂಡಿಕೇಟ್ ಸರ್ಕಲ್ ನಲ್ಲಿ ಯೂ ಟರ್ನ್ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಈ ವೇಳೆ ಕಾರಿಗೂ ಟಿಪ್ಪರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಟಿಪ್ಪರ್ ಪಲ್ಟಿಯಾದ ರಭಸಕ್ಕೆ ಟಿಪ್ಪರ್ ನಲ್ಲಿದ್ದ ಜಲ್ಲಿ ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಟಿಪ್ಪರ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.