ನಾಳೆಯ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆ ಮುಂದೂಡಿಕೆ

ಮಂಗಳೂರು: ರಾಜ್ಯದಲ್ಲಿ ಕೆಎಸ್ ಆರ್ ಟಿಸಿ ಮುಷ್ಕರದ ಹಿನ್ನೆಲೆಯಿಂದ ನಾಳೆ (ಬುಧವಾರ) ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ರದ್ದು ಮಾಡಿ ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದೆ.
ಎ.8 ರಿಂದ ಪರೀಕ್ಷೆಗಳು ನಿಗಧಿತ ದಿನಾಂಕಗಳಂತೆ ನಡೆಯಲಿದೆ.ಬುಧವಾರ ಪರೀಕ್ಷೆಯನ್ನು ಪರ್ಯಾಯ ದಿನಾಂಕದಂದು ನಿಗಧಿಪಡಿಸಲಾಗುವುದು ಎಂದು ಪರೀಕ್ಷಾಂಗ ಮುಖ್ಯಸ್ಥ ಪ್ರೊ.ಧರ್ಮಾ ತಿಳಿಸಿದ್ದಾರೆ.