ಕ್ರೀಡೆಗೆ ಎಲ್ಲರನ್ನೂ ಜತೆಗೂಡಿಸುವ ಶಕ್ತಿಯಿದೆ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ

ಉಡುಪಿ: ದಿನನಿತ್ಯದ ಜಂಜಾಟಗಳಿಂದ‌ ಸದಾ ಒತ್ತಡದಲ್ಲಿರುವ ಜನರನ್ನು ಒಂದೆಡೆ ಸೇರಿಸಿ ಯಾವುದೇ ವಯೋಮಿತಿಗೆ ಕಡಿವಾಣ ಹಾಕದೆ ಎಲ್ಲರಿಗೂ ಮುಕ್ತ ಅವಕಾಶ ಕೊಟ್ಟ ಈ ಕ್ರೀಡಾಕೂಟ ಬಹಳ ಅರ್ಥಪೂರ್ಣವಾದುದು. ಕ್ರೀಡೆಗೆ ಎಲ್ಲಾ‌ ಮನಸ್ಸುಗಳನ್ನು ಜೊತೆಯಾಗಿಸುವ ಶಕ್ತಿ ಇದೆ ಎಂದು ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಹೇಳಿದರು.

ಅವರು ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಪ್ರಯುಕ್ತ ಚರ್ಚ್ ಪಾಲನಾ ದಿವಸದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.


ಆಟದಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಇಂದು ಗೆದ್ದವರು ನಾಳೆ ಸೋಲಬಹುದು ಅಂತೆಯೇ ಇಂದು ಸೋತವರು ನಾಳೆ ಗೆಲ್ಲಬಹುದು. ಸೋಲು-ಗೆಲುವು ಶಾಶ್ವತವಲ್ಲ. ಆದರೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದರೆ‌‌ ಮಾತ್ರ ಜೀವನದಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ. ಇಂತಹ ಕ್ರೀಡಾಕೂಟಗಳು ಹೆಚ್ಚೆಚ್ಚು ನಡೆಯಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರುಗಳಾದ ಜಾನ್ ವಾಲ್ಟರ್ ಮೆಂಡೊನ್ಸಾ ವಹಿಸಿದ್ದರು. ಅತಿಥಿ ಧರ್ಮಗುರು ಲೆಸ್ಲಿ ಲೂವಿಸ್, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲೂಯಿಸ್ ಡಿಸೋಜಾ, ಶತಮಾನೋತ್ಸವ ಆಚರಣ ಸಮಿತಿಯ ಸಂಚಾಲಕ ಡೆರಿಕ್ ಡಿಸೋಜಾ ಉಪಸ್ಥಿತರಿದ್ದರು.

ಕ್ರೀಡಾಕೂಟ ಆಯೋಜನಾ ಸಮಿತಿಯ ಸಂಚಾಲಕ ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.