ಕಾರ್ಕಳ: ಛತ್ತೀಸ್ಗಢದಲ್ಲಿ ನಕ್ಸಲ್ ದಾಳಿಗೆ ಹುತಾತ್ಮರಾದ ಯೋಧರಿಗೆ ಕಾರ್ಕಳ ನಗರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ ಕಾರ್ಕಳದ ಆನೆಕೆರೆಯ ಅಮರ್ ಜವಾನ್ ಸ್ಮಾರಕದಲ್ಲಿ ಇಂದು ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳನ್ನುದ್ದೇಶಿಸಿ ತಾಲೂಕು ಸಹಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್ ಮಾತನಾಡಿ, ಕೇಂದ್ರ ಸರಕಾರವು ಸೈನಿಕರ ಬಲಿದಾನಕ್ಕೆ ನ್ಯಾಯವನ್ನು ದೊರಕಿಸಿಕೊಟ್ಟು ಸೈನಿಕರ ಹಿತ ಕಾಯಬೇಕು. ಕಮ್ಯುನಿಸ್ಟ್ ಸೈದ್ಧಾಂತಿಕ ಮನಸ್ಥಿತಿ ಈ ಘಟನೆಗೆ ಕಾರಣ ಹಾಗೂ ಭಯೋತ್ಪಾದಕರಿಗೆ ಇರುವ ಮಾನವ ಹಕ್ಕು ಸೈನಿಕರಿಗೆ ಯಾಕಿಲ್ಲ ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ರಾಜ್ಯಕಾರ್ಯಕಾರಣಿ ಸದಸ್ಯ ಯುಕೇಶ್ ಉಜಿರೆ, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ರಾಜ್ಯಕಾರ್ಯಕಾರಣಿ ಸದಸ್ಯೆ ಅಪರ್ಣ ಕಾರ್ಕಳ ಹಾಗೂ ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.