ಎ. 3ರಂದು ಅಂಬಲಪಾಡಿಯಲ್ಲಿ ಹಿರಿಯರ ನೆನಪು- 2021 ಕಾರ್ಯಕ್ರಮ

ಉಡುಪಿ: ವಿದ್ಯಾವಾಚಸ್ಪತಿ ದಿ. ಬನ್ನಂಜೆ ಗೋವಿಂದಾಚಾರ್ಯರಿಂದ ಸ್ಥಾಪಿತವಾದ ಈಶಾವಾಸ್ಯ ಪ್ರತಿಷ್ಠಾನ ಉಡುಪಿ- ಬೆಂಗಳೂರು ಇದರ ವತಿಯಿಂದ ‘ಹಿರಿಯರ ನೆನಪು-2021’ ಸಂಸ್ಕೃತಿ ಸಂಗಮ ಕಾರ್ಯಕ್ರಮವು ಎ. 3ರ ಶನಿವಾರದಂದು ಸಂಜೆ 5.30ಕ್ಕೆ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ನಡೆಯಲಿದೆ.

ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್, ಹಿರಿಯ ಚಿಂತಕ ಸಾಹಿತಿ ಅಂಬಾತನಯ ಮುದ್ರಾಡಿ ಭಾಗವಹಿಸುವರು.

ಈ ಸಂದರ್ಭದಲ್ಲಿ ಪ್ರಸಿದ್ಧ ವಿದ್ವಾಂಸರಾದ ಡಾ.ಉಡುಪಿ ರಾಮನಾಥ ಆಚಾರ್ಯ ಮತ್ತು ಹೋಮಿಯೋಪತಿ ವೈದ್ಯ ಡಾ. ಎಚ್. ವೆಂಕಟೇಶ್ ಬೆಂಗಳೂರು ಅವರನ್ನು ಸನ್ಮಾನಿಸಲಾಗುವುದು.
‘ಪುರಂದರೋಪನಿಷತ್ತು ಬನ್ನಂಜೆ ಕಂಡಂತೆ’ ಮತ್ತು ‘ತಲವಕಾರೋಪನಿಷತ್ ಬನ್ನಂಜೆ ಭಾಷ್ಯ ಸಹಿತ’ ಕೃತಿಗಳ ಲೋಕಾರ್ಪಣೆ ನಡೆಯಲಿದೆ.

ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಯಕ್ಷಗಾನ ಭಾಗವತ ನಾರಾಯಣ ಶಬರಾಯ ಮತ್ತು ಅವರ ಸುಪುತ್ರಿ ಗಾರ್ಗಿ ಸುದೀಪ್ ಅವರಿಂದ ರಾಗಧಾರಾ ಯಕ್ಷ – ಭಕ್ತಿ- ಸುಗಮ ಸಂಗೀತ ಯುಗಳ ಗಾಯನ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.