ಉಡುಪಿ ಜಿಲ್ಲೆಯ ಹಲುವಳ್ಳಿ ಎಂಬ ಗ್ರಾಮದ ಆಲಡ್ಕದ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಸದ್ಯ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಮುಂದಾಗಿದ್ದಾರೆ.
ಈ ಭಾಗದ ಜನರಿಗೆ ನೀರಿನ ಅಗತ್ಯತೆಗಳನ್ನು ಪೂರೈಸಲು ಈ ಹಿಂದೆ ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದ್ದರೂ ಕೂಡ ಈ ಹಿಂದಿನ ಜನಪ್ರತಿನಿಧಿಗಳು ಇದಕ್ಕೆ ಸೊಪ್ಪು ಹಾಕಿರಲಿಲ್ಲ, ಆದರೆ ಈಗ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಸುಮಾರು 4.25 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯಕ್ಕೆ ರಘುಪತಿ ಭಟ್ ಅವರು ಚಾಲನೆ ನೀಡಿದ್ದಾರೆ. ಸಣ್ಣ ನೀರಾವರಿ ಮತ್ತು ಅಂತರ್ಜಾಲ ಇಲಾಖೆಯ ವತಿಯಿಂದ ನಿರ್ಮಾಣವಾಗಲಿರುವ ಅಣೆಕಟ್ಟಿನ ಕಾಮಗಾರಿಗೆ ಇಂದು ಚಾಲನೆ ದೊರಕಿದ್ದು ಗ್ರಾಮದ ಜನರಲ್ಲಿ ಸಂತಸ ತಂದಿದೆ. ಯಾಕೆಂದರೆ ನೀರಿನ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಜನರ ಪಾಲಿಗೆ ಸದ್ಯ ಶಾಸಕರು ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದ್ದು, ಕಾಮಗಾರಿ ಶೀಘ್ರವೇ ಮುಗಿಸಿ ಜನರಿಗೆ ಅನುಕೂಲವಾಗುವಂತೆ ನೀರಿನ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸುಗ್ಗಿ ಸುಧಾಕರ್ ಶೆಟ್ಟಿ ಹುಬ್ಬಳ್ಳಿ, ರಮಾನಂದ ಸೂಡ ಹುಬ್ಬಳ್ಳಿ, ಕೃಷ್ಣ ಪೂಜಾರಿ ತಳಬಾ, ನವೀನ್ ಪುತ್ರನ್ ಕರ್ಜೆ, ಬಾಲಕೃಷ್ಣ ಪೂಜಾರಿ ಗುಡ್ಡೆಯಂಗಡಿ, ಪ್ರವೀಣ್ ಶೆಟ್ಟಿ ಕನ್ನಾರ್, ಪ್ರಶಾಂತ್ ಕನ್ನಾರ್ ಮತ್ತು ಕೊಂಟಿಬೈಲ್ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.