ಸರಳ ರೀತಿಯಲ್ಲಿ ವಿವಾಹವಾದ ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಅವರು ಐಎಎಸ್  ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರೊಂದಿಗೆ ಹುಬ್ಬಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೋಮವಾರ ಸರಳ ವಿವಾಹವಾಗಿದ್ದಾರೆ. ಉತ್ತರ ಕನ್ನಡದಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿ‌ ಕಾರ್ಯನಿರ್ವಹಿಸಿದ್ದ ಉಜ್ವಲ್ ಕುಮಾರ್ ಘೋಷ್ ಅವರು ಪ್ರಸ್ತುತ ಕೃಷ್ಣಾ ಮೇಲ್ದಂಡೆ ಭೂಸ್ವಾಧೀನ ಹಾಗು ಪುನರ್ವಸತಿ ಆಯುಕ್ತರಾಗಿದ್ದಾರೆ. ಹುಬ್ಬಳ್ಳಿ ಮಿನಿ ವಿಧಾನಸೌದದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ನಡೆಯಿತು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮೂವತ್ತು ದಿನಗಳ ಹಿಂದೆ ನೋಂದಣಿ […]

ಶಾಸಕ ರಘುಪತಿ ಭಟ್ ಅವರಿಂದ ಕರ್ಜೆ ಗ್ರಾಮಸ್ಥರಿಗೆ ಸಿಹಿಸುದ್ಧಿ: ಕಿಂಡಿ ಅಣೆಕಟ್ಟು ಕಾಮಗಾರಿಗೆ ಚಾಲನೆ

ಉಡುಪಿ ಜಿಲ್ಲೆಯ ಹಲುವಳ್ಳಿ ಎಂಬ ಗ್ರಾಮದ  ಆಲಡ್ಕದ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಸದ್ಯ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಮುಂದಾಗಿದ್ದಾರೆ. ಈ ಭಾಗದ ಜನರಿಗೆ ನೀರಿನ ಅಗತ್ಯತೆಗಳನ್ನು ಪೂರೈಸಲು ಈ ಹಿಂದೆ ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದ್ದರೂ ಕೂಡ ಈ‌ ಹಿಂದಿನ ಜನಪ್ರತಿನಿಧಿಗಳು ಇದಕ್ಕೆ ಸೊಪ್ಪು ಹಾಕಿರಲಿಲ್ಲ, ಆದರೆ ಈಗ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಸುಮಾರು 4.25 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯಕ್ಕೆ ರಘುಪತಿ ಭಟ್ ಅವರು […]

ಮೋದಿ ಸಫಾಯೀ ಕರ್ಮಚಾರಿ‌ಗಳ ಕಾಲು ತೊಳೆದ ವಿಚಾರ, ಇದೊಂದು ಚುನಾವಣಾ ಗಿಮ್ಮಿಕ್ಕು, ಮತ್ತೇನೂ ಅಲ್ಲ: ಈಶ್ವರ್ ಖಂಡ್ರೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಐದು ಸಾವಿರ ಕೋಟಿ ಖರ್ಚು ಮಾಡ್ತಾರೆ. ಆದರೆ ಚುನಾವಣೆ ಬಂದಾಗ ಸಫಾಯಿ ಕರ್ಮಚಾರಿ ನೆನಪಾಗ್ತಾನೆ.ಇದು ಚುನಾವಣಾ ಗಿಮ್ಮಿಕ್ಕು, ಮತ್ತೇನೂ ಅಲ್ಲ.‌ ಕಾಂಗ್ರೇಸ್ ಯಾವತ್ತೂ ಗಿಮಿಕ್ಮಾ ಮತ್ತೇನೂ ಡಿಲ್ಲ. ನಮ್ಮದು ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು. ಉಡುಪಿಯಲ್ಲಿ ಸೋಮವಾರ ‘ಪ್ರಧಾನಿ ಮೋದಿ ಸಫಾಯೀ ಕರ್ಮಚಾರಿ‌ಗಳ ಕಾಲು ತೊಳೆದ ವಿಚಾರ’ಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.  ನಾವು ಪೌರ ಕಾರ್ಮಿಕರನ್ನು ನಾವು ವಿದೇಶಕ್ಕೆ ಕಳಿಸಿದ್ದೇವೆ. ಅವರ ವೇತನ ಹೆಚ್ಚು ಮಾಡಿದ್ದೇವೆ. ಆದರೆ ಮೋದಿ ಬರೀ ಪ್ರಚಾರಕ್ಕೆ […]

ಕಾಡನ್ನು ಉಳಿಸಿ ಬೆಳೆಸಿ ,ವನ್ಯಜೀವಿಗಳನ್ನು ಸಂರಕ್ಷಿಸಿ : ಇದು ಉಡುಪಿxpress ಕಾಳಜಿ

 ಕಾರಿಗೆ ಸಿಕ್ಕ ಪ್ರಾಮುಖ್ಯತೆ ಕಾಡಿಗೆ ಸಿಗುತ್ತಿಲ್ಲ ನೂರಾರು ಎಕರೆ ಅರಣ್ಯ ಪ್ರದೇಶ ಬಂಡೀಪುರದಲ್ಲಿ ಕಾಳ್ಗಿಚ್ಚಿಗೆ ಬೂದಿಯಾಗಿದೆ. ಹಲವು ಜೀವ ಸಂಕುಲಗಳು ಅಪಾಯಕ್ಕೆ ಸಿಲುಕಿವೆ. ಆದರೆ ನಮಗೆ  ಕಾರುಗಳು ಕಾಣುತ್ತಿವೆ ಹೊರತು, ಹಲವು ಜೀವ ಸಂಕುಲಗಳನ್ನು ಪೋಷಿಸುತ್ತಾ ನಮ್ಮನ್ನು ಪೊರೆಯುತ್ತಿರುವ ಕಾಡುಗಳು ಕಾಣುತ್ತಿಲ್ಲ. ಕಾಡನ್ನು ಉಳಿಸಿ ಬೆಳೆಸಿ ,ವನ್ಯಜೀವಿಗಳನ್ನು ಸಂರಕ್ಷಿಸಿ ಯಾರದ್ದೋ ನಿರ್ಲಕ್ಷವೊ,ಕಿಡಿಗೇಡಿಗಳ ಕೃತ್ಯವೋ ಒಟ್ಟಿನಲ್ಲಿ ಮುಗ್ಧ ಪ್ರಾಣಿಗಳು ಪಕ್ಷಿಗಳು ಮರಗಿಡಗಳು ಬೆಂಕಿಗಾಹುತಿ ಆಗಿವೆ. ಇದೇ ಪರಿಸ್ಥಿತಿ  ಮನುಷ್ಯರಿಗೆ ಆಗುತ್ತಿದ್ದರೆ ಎಲ್ಲರೂ ನ್ಯಾಯ ಬೇಕು ಅಂತ ರಸ್ತೆಗಿಳಿಯುತಿದ್ದರು. ಆದರೆ ಮೂಕ […]