ಕಾರಿಗೆ ಸಿಕ್ಕ ಪ್ರಾಮುಖ್ಯತೆ ಕಾಡಿಗೆ ಸಿಗುತ್ತಿಲ್ಲ
ನೂರಾರು ಎಕರೆ ಅರಣ್ಯ ಪ್ರದೇಶ ಬಂಡೀಪುರದಲ್ಲಿ ಕಾಳ್ಗಿಚ್ಚಿಗೆ ಬೂದಿಯಾಗಿದೆ. ಹಲವು ಜೀವ ಸಂಕುಲಗಳು ಅಪಾಯಕ್ಕೆ ಸಿಲುಕಿವೆ. ಆದರೆ ನಮಗೆ ಕಾರುಗಳು ಕಾಣುತ್ತಿವೆ ಹೊರತು, ಹಲವು ಜೀವ ಸಂಕುಲಗಳನ್ನು ಪೋಷಿಸುತ್ತಾ ನಮ್ಮನ್ನು ಪೊರೆಯುತ್ತಿರುವ ಕಾಡುಗಳು ಕಾಣುತ್ತಿಲ್ಲ.
ಕಾಡನ್ನು ಉಳಿಸಿ ಬೆಳೆಸಿ ,ವನ್ಯಜೀವಿಗಳನ್ನು ಸಂರಕ್ಷಿಸಿ
ಯಾರದ್ದೋ ನಿರ್ಲಕ್ಷವೊ,ಕಿಡಿಗೇಡಿಗಳ ಕೃತ್ಯವೋ ಒಟ್ಟಿನಲ್ಲಿ ಮುಗ್ಧ ಪ್ರಾಣಿಗಳು ಪಕ್ಷಿಗಳು ಮರಗಿಡಗಳು ಬೆಂಕಿಗಾಹುತಿ ಆಗಿವೆ. ಇದೇ ಪರಿಸ್ಥಿತಿ ಮನುಷ್ಯರಿಗೆ ಆಗುತ್ತಿದ್ದರೆ ಎಲ್ಲರೂ ನ್ಯಾಯ ಬೇಕು ಅಂತ ರಸ್ತೆಗಿಳಿಯುತಿದ್ದರು. ಆದರೆ ಮೂಕ ಜೀವಿಗಳು ಮರಗಿಡಗಳು ಯಾರ ಹತ್ತಿರ ಕೇಳೋದು ನೀವೇ ಹೇಳಿ .ಅವರಿಗೂ ಜೀವಿಸುವ ಹಕ್ಕಿದೆಯಲ್ಲ . ಪ್ರಕೃತಿ ಮನುಷ್ಯನಿಗೆ ಅವಶ್ಯಕ ,ಅದನ್ನು ಹಾಳು ಮಾಡಬೇಡಿ.
ದಯವಿಟ್ಟು ಕಾಡನ್ನು ಉಳಿಸಿ ಬೆಳೆಸಿ ,ವನ್ಯಜೀವಿಗಳನ್ನು ಸಂರಕ್ಷಿಸೋಣ .ಮನುಷ್ಯರಿಗೆ ಎಷ್ಟೇ ಸಹಾಯ ಮಾಡಿದರು ಒಂದಲ್ಲ ಒಂದು ದಿನ ಅವರು ತಿರುಗಿ ಬೀಳಬಹುದು . ಆದರೆ ಪ್ರಕೃತಿ ಹಾಗಲ್ಲ ಪ್ರಾಣಿ ಪಕ್ಷಿಗಳಿಗಾಗಲಿ ಮರ ಗಿಡಗಳಿಗಾಗಿ ನೀವು ಒಂಚೂರು ಸಹಾಯ ಮಾಡಿದರೂ ಅವು ನಾವು ಸಾಯೋ ತನಕ ಮರೆಯೋಲ್ಲ .ಮರಗಿಡ ಆದರೆ ಏನಿಲ್ಲಾದರೂ ಕೊನೆಗೆ ನೆರಳಾದರು ಕೊಡುತ್ತದೆ. ಪ್ರಾಣಿ ಪಕ್ಷಿಗಳು ನಿಯತ್ತು ತೋರಿಸುತ್ತೆ ದಯವಿಟ್ಟು ಮನುಷ್ಯನಲ್ಲದ ಜೀವಿಗಳು ಎಂದು ತಾತ್ಸಾರ ಮಾಡಬೇಡಿ. ಪ್ರಾಣಿ ಪಕ್ಷಿಗಳು ನಮ್ಮಂತೆ ಜೀವಿಗಳು,ಅವುಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ. ನಾವು ಮನುಷ್ಯರು ಮುಂದೆಂದೂ ಇಂತಹ ಅನಾಹುತ ನಡೆಯದಂತೆ ತಪ್ಪಿಸಬಹುದು.
ಕಾಡನ್ನ ಬೆಳೆಸಿ ,ನಾಡನ್ನು ಉಳಿಸಿ
– ಟೀಮ್ ಉಡುಪಿxpress