ಬ್ರಹ್ಮಾವರ: ನೀಲಾವರ ಗ್ರಾಮದ, ಎಳ್ಳಂಪಳ್ಳಿ ನಿವಾಸಿಯಾದ ವೆಂಕಟರಮಣ (75) ಎಂಬವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾ. 5ರಂದು ಸಂಜೆ ಬೆಳಕಿಗೆ ಬಂದಿದೆ.
ಮಾಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೆಂಕಟರಮಣ ಅವರು, ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಇದೇ ಖಿನ್ನತೆಯಲ್ಲಿ ಬಾವಿಯ ಕಬ್ಬಿಣದ ಸರಳಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಮಗ ಸತೀಶ್ ಅಡಿಗ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












