ಬೆಂಗಳೂರು: ಮಾನಹಾನಿಕರ ಸುದ್ದಿ ಸ್ಫೋಟದ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಆರು ಪ್ರಭಾವಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ.
ಎಸ್, ತಮ್ಮ ವಿರುದ್ಧ ಮಾಧ್ಯಮಗಳು ವರದಿ ಮಾಡಬಾರದು ಎಂದು ವಿನಂತಿಸಿ ನಗರದ ಬಹುತೇಕ ಪ್ರಮುಖ ಮಾಧ್ಯಮಗಳನ್ನು (ಟಿವಿ ಮತ್ತು ದಿನಪತ್ರಿಕೆಗಳು ಸೇರಿ) ಪ್ರತಿವಾದಿಗಳನ್ನಾಗಿಸಿ, ರಾಜ್ಯದ ಆರು ಸಚಿವರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ ಮತ್ತು ಭೈರತಿ ಬಸವರಾಜ್ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಚಿವರು ಏಕಾಏಕಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಮೇಶ ಜಾರಕಿಹೊಳಿ ಪ್ರಕರಣ ಬಹಿರಂಗಗೊಂಡ ನಂತರ ಇತರ ಕೆಲವರ ಸಿಡಿಗಳೂ ಹೊರಬರಬಹುದು ಎಂಬ ಮಾತುಗಳು ಅಲ್ಲಲ್ಲಿ ಕೇಳಿಬಂದಿದ್ದವು. ಇದೀಗ ಈ ಆರು ಮಂದಿ ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಚ್ಚರಿ ಮೂಡಿಸಿದೆ.