ಮಂಗಳೂರು: ಉಭಯ ಜಿಲ್ಲೆಗಳಲ್ಲಿ ಮಕ್ಕಳ ಮಾರಾಟ ಜಾಲದಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರು ಸಹಿತ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೂಲ್ಕಿ ನಿವಾಸಿ ರಾಯನ್, ಕಾರ್ಕಳದ ಕವಿತಾ ಮತ್ತು ಮರಿಯಮ್ಮ ಎಂದು ಗುರುತಿಸಲಾಗಿದೆ. ಆರೋಪಿ ರಾಯನ್ ನನ್ನು ಮಂಗಳೂರಿನ ಕದ್ರಿಯ ಹೋಟೆಲ್ ಒಂದರಲ್ಲಿ ಪೊಲೀಸರು ಬಂಧಿಸಿದ್ದಾರೆ.
ರಾಯನ್ ನಿಂದ ಮಗು ಖರೀದಿಸಿ ಮಾರಾಟ ಮಾಡಿದ ಕವಿತಾ ಮತ್ತು ಕವಿತಾಳಿಂದ ಮಗು ಖರೀದಿಸಿದ ಮರಿಯಮ್ಮಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಯಾನ್ ಹಾಸನದಿಂದ ಸುಮಾರು ಐದು ತಿಂಗಳ ಮಗುವೊಂದನ್ನು ತಂದು ಕಾರ್ಕಳದ ಕವಿತಾ ಎಂಬುವವರಿಗೆ ₹ 5 ಲಕ್ಷಕ್ಕೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಕವಿತಾ ಆ ಮಗುವನ್ನು ಮರಿಯಮ್ಮ ಎಂಬಾಕೆ ಮಾರಾಟ ಮಾಡಿದ್ದಾಳೆ ಎಂದು ತಿಳಿದುಬಂದಿದೆ.