ಬ್ರಹ್ಮಾವರ: ನಾಳೆ ‘ಸತ್ಯನಾಥ ಸ್ಟೋರ್ ್ಸ ನೂತನ ಬೃಹತ್ ಬಟ್ಟೆ ಮಳಿಗೆಯ ಉದ್ಘಾಟನೆ

ಬ್ರಹ್ಮಾವರ: ಕಳೆದ ಏಳು ದಶಕಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉಡುಪುಗಳನ್ನು ನೀಡುತ್ತಿರುವ, ಕರಾವಳಿ ಹಾಗೂ ಮಲೆನಾಡಿನಾದ್ಯಂತ ಸಾಕಷ್ಟು ಹೆಸರುವಾಸಿಯಾಗಿರುವ ‘ಸತ್ಯನಾಥ ಸ್ಟೋರ್ ್ಸ’ ನೂತನ ಬೃಹತ್ ಬಟ್ಟೆ ಮಳಿಗೆ ಬ್ರಹ್ಮಾವರ ಮಾರಿಗುಡಿ ರಸ್ತೆಯ ಹಳೆ ಪೊಲೀಸ್ ಸ್ಟೇಷನ್ ಮುಂಭಾಗದ ವಿಶಾಲವಾದ ಜಾಗ ನಿರ್ಮಾಣಗೊಂಡಿರುವ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಮಾರ್ಚ್ 7ರಂದು ಬೆಳಿಗ್ಗೆ 9ಗಂಟೆಗೆ ಶುಭಾರಂಭಗೊಳ್ಳಲಿದೆ.

1949ರಲ್ಲಿ ಆರಂಭಗೊಂಡ ಈ ಮಳಿಗೆಯು ಜವಳಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಏಳು ದಶಕಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಿದ್ಧ ಉಡುಪುಗಳನ್ನು ನೀಡುವುದರ ಜತೆಗೆ ಒಳ್ಳೆಯ ಸೇವೆಯನ್ನು ನೀಡುತ್ತಿದೆ. ಕೈಗೆಟುಕುವ ದರದಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ವಿನ್ಯಾಸಗಳ ಉಡುಪುಗಳನ್ನು ನೀಡುವಲ್ಲಿ ಸಂಸ್ಥೆ ಸೈ ಎನಿಸಿಕೊಂಡಿದೆ. ತನ್ನ ಉತ್ತಮ ಸೇವೆಯ ಮೂಲಕವೇ ಕರಾವಳಿ ಹಾಗೂ ಮಲೆನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ.

ವಿವಿಧ ವಿನ್ಯಾಸದ ಉಡುಪುಗಳ ಸಂಗ್ರಹ:

ಮದುವೆ ಹಾಗೂ ಸಮಾರಂಭಗಳ ಬಟ್ಟೆಗಳು ಸಹಿತ ಬನಾರಸ್, ಧರ್ಮಾವರಂ, ಕಾಂಚೀವರಂ,‌ ಕಾಟನ್ ಸಾರಿ, ಕಾಟನ್ ಸಿಲ್ಕ್, ಕೋಲ್ಕತಾ ಕಾಟನ್, ಬಾಂಗ್ಲಾ ಕಾಟನ್, ಫ್ಯಾನ್ಸಿ ಡಿಸೈನರ್ ಸಾರೀಸ್, ಬ್ರೈಡಲ್ ಲೆಹಂಗಾ, ಕುರ್ತೀಸ್, ಲಾಂಗ್ ಟಾಪ್, ಚೂಡಿದಾರ, ಮೆನ್ಸ್ ವೇರ್, ಮಕ್ಕಳ ಉಡುಪು, ಹ್ಯಾಂಡ್ ಲೂಮ್ಸ್, ಬ್ರ್ಯಾಂಡೆಡ್ ಡಿಸೈನ್ ಸಾರಿ ಸಹಿತ ನಾನಾ ಕಂಪೆನಿಗಳ ವಿವಿಧ ವಿನ್ಯಾಸದ ಉಡುಪುಗಳು ಆಕರ್ಷಕ ದರದಲ್ಲಿ ಲಭ್ಯವಿದೆ.

ಮಳಿಗೆಯ ವಿಶೇಷತೆಗಳು:
*20ಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಜವಳಿಯ ಅಪಾರ ಸಂಗ್ರಹವಿದೆ.
*30ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ನಾಲ್ಕು ಅಂತಸ್ತುಗಳ ಹವಾನಿಯಂತ್ರಿತ ಮಳಿಗೆ.
*300ಕ್ಕೂ ಅಧಿಕ ವಾಹನ ನಿಲುಗಡೆಗೆ ವ್ಯವಸ್ಥೆ
*ಮಳಿಗೆ ಬರುವ ಗ್ರಾಹಕರಿಗೆ ಫ್ರೀ ವೈಫೈ ಸೌಲಭ್ಯ.
*ಗ್ರಾಹಕರಿಗೆ ಕಟ್ಟಡದ ಆವರಣದಲ್ಲೇ ಫುಡ್ ಕೋರ್ಟ್ ವ್ಯವಸ್ಥೆ.

ಮಾ. 7ಕ್ಕೆ ಉದ್ಘಾಟನೆ
ಸ್ಯಾಬರಕಟ್ಟೆ ಗರಿಕೆಮಠ ಶ್ರೀಅರ್ಕ ಮಹಾಗಣಪತಿ ದೇವಸ್ಥಾನದ ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ ಅವರು ಮಾ. 7ರಂದು ಬೆಳಿಗ್ಗೆ 9 ಗಂಟೆಗೆ ಮಳಿಗೆಯನ್ನು ಉದ್ಘಾಟಿಸುವರು. ಸಂಜೆ 6ಕ್ಕೆ ಸತ್ಯನಾಥ ಗಾನವೈಭವ ಸಂಗೀತ ಕಾರ್ಯಕ್ರಮ ನಡೆಯಲಿದೆ.