ಉಡುಪಿ: ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ತಾಲೂಕಿನ ಅಂಬಲಪಾಡಿ ಗ್ರಾಮದ ಬನ್ನಂಜೆ ಎಂಬಲ್ಲಿ ನಡೆದಿದೆ.
ಅಂಬಲಪಾಡಿ ಗ್ರಾಮದ ಬನ್ನಂಜೆ ನಿವಾಸಿ ಗುಲಾಬಿ ಶೆಡ್ತಿ ಅವರ ಹರೀಶ್ ಶೆಟ್ಟಿ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮಂಡ್ಯದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಒಂದುವರೆ ತಿಂಗಳ ಹಿಂದೆ ಮಂಡ್ಯದಿಂದ ಉಡುಪಿ ಮನೆಗೆ ಬಂದಿದ್ದರು.
ಮಾ. 3ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ಮರುದಿನ ಮಾ. 4ರಂದು ಬೆಳಿಗ್ಗೆ 4ಗಂಟೆಗೆ ತಾಯಿ ಗುಲಾಬಿ ಶೆಡ್ತಿ ಎದ್ದು ನೋಡುವಾಗ ಮಗ ಹರೀಶ್ ಮನೆಯ ಪಕ್ಕದಲ್ಲಿರುವ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.